ಗ್ರಾಹಕರ ಸೋಗಿನಲ್ಲಿ ಕಳ್ಳಿಯ ಕೈಚಳಕ: 20 ಸಾವಿರಕ್ಕೆ ಕನ್ನ!
ಚಳ್ಳಕೆರೆ: ಚಳ್ಳಕೆರೆ ನಗರದ ಅಶೋಕ ಗಿರವಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯೋರ್ವಳು ಹಣ ಎಗರಿಸಿ ಎಸ್ಕೆಪ್ ಆದ ಘಟನೆ ಜರುಗಿದೆ. ಕಳ್ಳಿಯ ಕೃತ್ಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಲಕ್ಷ್ಮಿ ಎಂಬುವರು ಮಗನ ಮದುವೆಗೆ ಒಡವೆ ಖರೀದಿ ಮಾಡಲು ಬಟ್ಟೆ ಬ್ಯಾಗಿನಲ್ಲಿ ಹಣ ಇಟ್ಟುಕೊಂಡು ಅಶೋಕ್ ಗಿರವಿ ಅಂಗಡಿಗೆ ಒಡವೆ ಖರೀದಿ ಮಾಡಲು ಮುಂದಾಗಿದರು.
ಮಹಿಳೆಯೋರ್ವಳು ಕಂಕಳಲ್ಲಿ ಮಗು ಎತ್ತಿಕೊಂಡು ಬಂದು ಬೆಳ್ಳಿಯ ರಿಂಗ್ ಕೇಳಿದ್ದು ಅಂಗಡಿ ಮಾಲಿಕ ಬೆಳ್ಳಿ ರಿಂಗಿಲ್ಲ ಬಂಗಾರದ ರಿಂಗ್ ಇವೆ ಎಂದಾಗ ಮಹಿಳೆ ಬ್ಯಾಗ್ ನಲ್ಲಿದ್ದ ಹಣದ ಮೇಲೆ ದೃಷ್ಟಿ ಹರಿಸಿ ಪಕ್ಕದಲ್ಲೇ ಕುಳಿತು ಬ್ಯಾಗ್ ನಲ್ಲಿದ್ದ ಹತ್ತು ಸಾವಿರ ಎರಡು ಕಟ್ಟು ಒಟ್ಟು ಇಪ್ಪತ್ತು ಸಾವಿರ ಹಣ ಕದ್ದು ಎಸ್ಕೆಪ್ ಆಗಿದ್ದಾಳೆ ಮಗನ ಒಡವೆ ಖರೀದಿ ಮಾಡಲು ಬ್ಯಾಗ್ ನಲ್ಲಿದ್ದ ಹಣ ಕೊಡಲು ಮುಂದಾದಾಗ ಇಪ್ಪತ್ತು ಸಾವಿರ ಕಳವಾಗಿರುವುದು ಬೆಳಕಿಗೆ ಬಂದಿದ್ದು ಅಂಗಡಿಯಲ್ಲಿನ ಸಿ.ಸಿ ಕ್ಯಾಮರದಲ್ಲಿ ಮಹಿಳೆಯ ಕೈಚಳಕದ ದೃಶ್ಯ ಸೆರೆಯಾಗಿದೆ ಪೋಲಿಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಬಂದು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.