ಲಕ್ನೋ : ಮಹಿಳೆಯೊಬ್ಬರು ತನ್ನ ಮಗಳಿಗೆ ಡಾಕ್ಟರ್ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಹೇಳಿದ್ದರೆ ಸಿಟ್ಟಾದ ವೈದ್ಯ ಮಹಾಶಯನೊಬ್ಬ ಆ ತಾಯಿ ಮತ್ತು ಆಕೆಯ ಮಗಳನ್ನು ಕೊಲ್ಲಲ್ಲು ಯತ್ನಿಸಿದ್ದಾನೆ.
ಉತ್ತರ ಪ್ರದೇಶದ ಘಾಜಿಯಾಬಾದಲ್ಲಿ ಈ ಘಟನೆ ನಡೆದಿರುವುದು. ಮಗಳಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲವೆಂದು ತಾಯಿಯೊಬ್ಬರು ದೂರಿದ್ದಕ್ಕೆ ದಂತ ವೈದ್ಯನೊಬ್ಬ ಇಬ್ಬರನ್ನೂ ಕೊಲೆ ಮಾಡಲು ಯತ್ನಿಸಿ, ಅಡ್ಡ ಬಂದ ನಾಯಿ ಮರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಯಾಮಿನ್ ಸಿದ್ದಿಕಿ ಎಂಬ ವೈದ್ಯ ಆರೋಪಿ. ವಿಜಯನಗರದಲ್ಲಿ ಈತ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದು, ಕಳೆದ 6 ತಿಂಗಳಿನಿಂದ ಮಹಿಳೆಯೊಬ್ಬರು ತನ್ನ ಮಗಳ ಹಲ್ಲು ನೋವಿಗೆ ಈತನಿಂದ ಚಿಕಿತ್ಸೆ ಕೊಡಿಸುತ್ತಿದ್ದರೂ ನೋವು ಕಡಿಮೆ ಆಗಿರಲಿಲ್ಲ. ಆದ್ದರಿಂದ ಸಿದ್ದಿಕಿ ಬಳಿ ಮಹಿಳೆ ಜಗಳ ಆಡಿದ್ದು, ಆಗ ಮನೆಗೆ ನುಗ್ಗಿ ಚಾಕುವಿನಿಂದ ತಾಯಿ, ಮಗಳನ್ನು ಕೊಲ್ಲಲು ಮುಂದಾಗಿದ್ದಾನೆ. ಆಗ ಅಡ್ಡ ಬಂದ ನಾಯಿಯನ್ನು ಅಮಾನುಷವಾಗಿ ಕೊಂದಿದ್ದಾನೆ. ಸ್ಥಳೀಯ ಪೊಲೀಸರು ಬಂಧಿಸಿ ಆರೋಪಿ ಯಾಮಿನ್ ಗೆ ಜೈಲೂಟ ಮಾಡಲು ಕಳುಹಿಸಿಕೊಟ್ಟಿದ್ದಾರೆ.