ಚಿನ್ನದ ಬೆಲೆ ಮತ್ತೆ ಕುಸಿಯಿತೇ? ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ
ನಮ್ಮಲ್ಲಿ ಬಂಗಾರ ಅಂದರೆ ಮುಗಿಯಿತು, ಅದರ ಮೇಲೆ ಒಂದು ರೀತಿಯ ಮುಗಿಯದ ಮೋಹ. ಇದನ್ನು ಸಂಪತ್ತಾಗಿ, ಆಭರಣವಾಗಿ, ಸ್ಟೇಟಸ್ ಆಗಿ, ಉಳಿತಾಯವಾಗಿ ನೋಡುತ್ತಾರೆ. ಇದರ ಬೇಡಿಕೆ ಬಂಗಾರದ ಬೆಲೆಯನ್ನು ಗಗನಕ್ಕೇರಿಸಿದೆ. ಇನ್ನೂ ನಿನ್ನೆ ಬುಧವಾರ ಆದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಇಳಿಕೆ ಇಂದು ಗುರುವಾರವೂ ಮುಂದುವರಿದಿದೆ.
ಬೆಳ್ಳಿ ಬೆಲೆ ಎರಡು ದಿನದಲ್ಲಿ 3 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 10,240 ರೂನಿಂದ 10,190 ರೂಗೆ ಇಳಿದಿದೆ. 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 11,117 ರೂಗೆ ಇಳಿದಿದೆ. ಬೆಂಗಳೂರು ಇತ್ಯಾದಿ ಕಡೆ ಬೆಳ್ಳಿ ಬೆಲೆ 132 ರೂನಿಂದ 131 ರೂಗೆ ಇಳಿದಿದೆ. ಚೆನ್ನೈ ಮೊದಲಾದೆಡೆ ಬೆಲೆ 141 ರೂಗೆ ಇಳಿದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,01,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,11,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 13,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,01,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 13,100 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 14,100 ರೂ ಇದೆ.