ಚಿನ್ನ ಕಳ್ಳ ಸಾಗಾಟ ಕೇಸ್: ಇಂದು ನಟಿ ರನ್ಯಾ ರಾವ್ ಜಾಮೀನು ಭವಿಷ್ಯ
ಬೆಂಗಳೂರು: ದುಬೈನಿಂದ ಚಿನ್ನ ಕಳ್ಳ ಸಾಗಾಟದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಕೇಸ್ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇನ್ನೂ ನಟಿ ರನ್ಯಾ ರಾವ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ದುಬೈನಿಂದ ಕೋಟಿ ಕೋಟಿ ಬೆಲೆಬಾಳುವ ಚಿನ್ನ ತಂದು ಡಿಆರ್‌ಐ ಅಧಿಕಾರಿಗಳಿಗೆ ಲಾಕ್ ಆಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ, ಆರ್ಥಿಕ ಅಪರಾಧದ ವಿಶೇಷ ನ್ಯಾಯಾಲದಲ್ಲಿ ವಾದ-ಪ್ರತಿವಾದ ನಡೆಸಲಾಗಿದ್ದು, ಜಾಮೀನು ಆದೇಶ ಇಂದಿಗೆ ಕಾಯ್ದಿರಿಸಲಾಗಿದೆ.
ಇಂದು ಮಧ್ಯಾಹ್ನದ ನಂತರ ನಟಿಯ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಆರೋಪಿ ನಟಿ ರನ್ಯಾ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಾಡಿದ್ದು, ಡಿಆರ್‌ಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಹೆಣ್ಣು ಎಂದೂ ನೋಡದೆ ರಾತ್ರಿಯಿಡೀ ತನಿಖೆ ಮಾಡಿ ಮಾನಸಿವಾಗಿ ಹಿಂಸೆ ನೀಡುವ ಕೆಲಸವಾಗಿದೆ. ಅರೆಸ್ಟ್ ಮೇಮೊ ಕೂಡ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ನನ್ನ ಕಕ್ಷಿದಾರೆಯ ಪಾತ್ರ ಇಲ್ಲ. ತನಿಖೆಗೆ ಸಹಕಾರ ನೀಡುತ್ತಿದ್ದು, ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.