ಚಿನ್ನ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ಬೆಲೆ ಮತ್ತೆ ಏರಿಕೆ – ಇಂದಿನ ದರ ಹೀಗಿದೆ
ಮೊದಲೆಲ್ಲಾ ಚಿನ್ನ ಖರೀದಿಯಲ್ಲವೇ ಬೇಕಾದಾಗ ಮಾಡಿಸಿದರಾಯಿತು ಎಂದು ಮುಂದೂಡುತ್ತಿದ್ದರು ಆದರೀಗ ಚಿನ್ನದ ಬೆಲೆ ಇಳಿಕೆಯಾದೊಡನೆ ಗ್ರಾಹಕರು ನಾ ಮುಂದು ತಾ ಮುಂದು ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ. ಒಮ್ಮೊಮ್ಮೆ ಚಿನ್ನದ ಬೆಲೆ ಗಗನಕ್ಕೇರಿದ್ದರೆ ಇನ್ನು ಕೆಲವೊಮ್ಮೆ ಕೆಳಮಟ್ಟಕ್ಕೆ ಇಳಿಯುತ್ತದೆ ಹೀಗಾಗಿ ಜನ ಹುಷಾರಾಗಿ ಬೆಲೆ ಇಳಿದಾಗಲೇ ಚಿನ್ನ ಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಇದೀಗ ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಬರೋಬ್ಬರಿ 760 ರೂಪಾಯಿ ಹೆಚ್ಚಳ ಕಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,331 ರೂಪಾಯಿ ಆಗಿದ್ದು,ಇಂದು 76 ರುಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 70 ರೂಪಾಯಿ ಏರಿಕೆ ಆಗಿದ್ದು, 9,470 ರುಪಾಯಿ ಆಗಿದೆ.24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 760 ರೂ ಹೆಚ್ಚಳ ಆಗಿ, 1,03,310 ರುಪಾಯಿಗೆ ಏರಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 700 ರೂ ಏರಿಕೆ ಆಗಿ 94,700 ರೂ ಆಗಿದೆ.ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10,331 ರೂ ಇದೆ. ಬೆಳ್ಳಿಯ ಬೆಲೆ ತಟಸ್ಥವಾಗಿದ್ದು 1,17,000 ರೂ ಆಗಿದೆ.