ಚೀನಾ ನಮ್ಮ ಮುಖ್ಯವಾದ ಪಾರ್ಟ್ನರ್ ಎಂದು ಹೇಳಿಕೊಂಡ ತಾಲಿಬಾನ್!

Date:

ಚೀನಾ ನಮ್ಮ ಪ್ರಮುಖ ಪಾಲುದಾರ ಹಾಗೂ ಅಫ್ಘಾನಿಸ್ತಾನದ ಆರ್ಥಿಕ ಪುನರುಜ್ಜೀವನಕ್ಕೆ ತಾಲಿಬಾನ್ ನಾಯಕತ್ವ ಬೀಜಿಂಗ್‌ನ ಹಣಕಾಸು ನೆರವಿನ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಶುಕ್ರವಾರ ಹೇಳಿದ್ದಾರೆ.

ಇಟಲಿ ಪತ್ರಿಕೆಯೊಂದಿಗೆ ಮಾತನಾಡಿರುವ ಜಬೀವುಲ್ಲಾ, ‘ಅಫ್ಘಾನಿಸ್ತಾನದಲ್ಲಿ ತಾಲಿಬಾನ್, ತನ್ನ ಆರ್ಥಿಕತೆ ಸುಧಾರಣೆ ಹಾಗೂ ಪುನರುಜ್ಜೀವನಕ್ಕೆ ಚೀನಾದ ನಿಧಿಯನ್ನು ಅವಲಂಬಿಸಿದೆ’ ಎಂದು ಹೇಳಿಕೊಂಡಿದ್ದಾರೆ. ಚೀನಾ ನಮಗೆ ಅಸಾಧಾರಣ ಅವಕಾಶಗಳನ್ನು ನೀಡುತ್ತಿದೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಹಾಗೂ ದೇಶದ ಪುನರ್ ನಿರ್ಮಾಣಕ್ಕೆ ನೆರವಾಗಲು ಚೀನಾ ಸಿದ್ಧವಾಗಿದೆ. ಹೀಗಾಗಿ ಚೀನಾ ನಮ್ಮ ಪ್ರಮುಖ ಪಾಲುದಾರನಾಗಲಿದೆ’ ಎಂದು ಜಬೀವುಲ್ಲಾ ‘ಲಾ ರಿಪಬ್ಲಿಕಾ’ಗೆ ತಿಳಿಸಿದ್ದಾರೆ.

‘ದೇಶದಲ್ಲಿ ಶ್ರೀಮಂತ ತಾಮ್ರದ ಗಣಿಗಳಿವೆ. ಚೀನಾದವರಿಂದ ಕಾರ್ಯಾಚರಣೆ ಹಾಗೂ ಆಧುನೀಕರಣ ಸಾಧ್ಯವಾಗುವ ನಿರೀಕ್ಷೆಯಿದೆ. ಇದರೊಂದಿಗೆ ಪ್ರಪಂಚದಾದ್ಯಂತ ಮಾರುಕಟ್ಟೆಗಳಿಗೆ ಚೀನಾ ನಮಗೆ ದಾರಿಯಾಗಬಹುದಾಗಿದೆ’ ಎಂದು ಹೇಳಿದ್ದಾರೆ.

ಸರ್ಕಾರ ರಚಿಸಲು ಹೊರಟಿರುವ ತಾಲಿಬಾನ್ ಎದುರಿಗೆ ಸದ್ಯ ಸಾಕಷ್ಟು ಸವಾಲುಗಳಿವೆ. ಅಂತರರಾಷ್ಟ್ರೀಯ ಹೂಡಿಕೆದಾರರ ಮೇಲೆ ತಾಲಿಬಾನ್ ದೃಷ್ಟಿ ನೆಟ್ಟಿದೆ. ಸಾಮೂಹಿಕ ಸ್ಥಳಾಂತರ ಪ್ರಕ್ರಿಯೆ ನಂತರ ಅಫ್ಘನ್ನರು ಮತ್ತು ವಿದೇಶಿ ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಆದರೆ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಂದಿಗೂ ಮುಚ್ಚಿದೆ. ಸರ್ಕಾರ ರಚನೆ, ವ್ಯಾಪಾರ ವಹಿವಾಟಿಗೆ ಇತರೆ ದೇಶಗಳ ಬೆಂಬಲವನ್ನು ಮನಗಂಡಿರುವ ತಾಲಿಬಾನ್ ಈಗ ಚೀನಾ ನೆರವನ್ನು ಬಯಸುತ್ತಿದೆ.

 

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...