ಚೀನಾ ಬಡತನ ಮುಕ್ತವಂತೆ!

Date:

2012ರಲ್ಲಿ ಅಧಿಕಾರ ವಹಿಸಿಕೊಂಡ ಕ್ಸಿ ಬಡತನ ನಿರ್ಮೂಲನೆಯೇ ಮೂಲ ಗುರಿ ಎಂದು ಘೋಷಿಸಿದ್ದರು. ಅಲ್ಲದೆ ವಿಶ್ವ ಬ್ಯಾಂಕ್ ನೀಡಿದ್ದ 2030ರ ಗುರಿಯ ಒಳಗೆ ಬಡತನ ನಿರ್ಮೂಲನೆ ಮಾಡಿ ವಿಶ್ವಕ್ಕೆ ಚೀನಾ ಮಾದರಿಯಾಗಿದೆ ಎಂದು ಕ್ಸಿ ಜನತೆಯನ್ನು ಉದ್ದೇಶಿಸಿ ಮಾಡಿರುವ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

: ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಚೀನಾದಲ್ಲಿ ತೀವ್ರ ಬಡತನವು ಸಂಪೂರ್ಣ ಅಂತ್ಯವಾಗಿದೆ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದೆ.

ಚೀನಾದಲ್ಲಿ ತೀವ್ರ ಬಡತನದಲ್ಲಿ ಯಾರೂ ಸಹ ಜೀವಿಸುತ್ತಿಲ್ಲ ಎಂದು ಕಳೆದ ನವೆಂಬರ್​​ನಲ್ಲಿ ಘೋಷಿಸಲಾಗಿತ್ತು. ಈ ವೇಳೆಗಾಗಲೇ 99 ಮಿಲಿಯನ್ ಜನರ ವಾರ್ಷಿಕ ಆದಾಯವು 2,300 ಯುವಾನ್​ (355 ಡಾಲರ್) ಗಿಂತಲೂ ಕಡಿಮೆಯಾಗಿಲ್ಲ ಎಂದು ಅಂದಾಜಿಸಲಾಗಿತ್ತು.

ಸರ್ಕಾರಿ ಒಡೆತನದ ಪತ್ರಿಕೆಗಳಲ್ಲಿ ಈ ತಿಂಗಳ ಪ್ರಕಟಣೆಯಲ್ಲಿ ಬಡತನ ನಿರ್ಮೂಲನೆ ಕುರಿತಾದ ಹಾಗೂ ಅದರ ಕಾರ್ಯದಲ್ಲಿ ಕ್ಸಿ ಅವರ ಸಾಧನೆ ಬಣ್ಣಿಸುವ ವರದಿಗಳು ಬಿತ್ತರವಾಗಿವೆ.

2012ರಲ್ಲಿ ಅಧಿಕಾರ ವಹಿಸಿಕೊಂಡ ಕ್ಸಿ ಬಡತನ ನಿರ್ಮೂಲನೆಯೇ ಮೂಲಗುರಿ ಎಂದು ಘೋಷಿಸಿದ್ದರು. ಅಲ್ಲದೆ ವಿಶ್ವ ಬ್ಯಾಂಕ್ ನೀಡಿದ್ದ 2030ರ ಗುರಿಯ ಒಳಗೆ ಬಡತನ ನಿರ್ಮೂಲನೆ ಮಾಡಿ ವಿಶ್ವಕ್ಕೆ ಚೀನಾ ಮಾದರಿಯಾಗಿದೆ ಎಂದು ಕ್ಸಿ ಜನತೆಯನ್ನು ಉದ್ದೇಶಿಸಿ ಮಾಡಿರುವ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಕ್ಸಿ ಪ್ರಕಾರ, ಸುಮಾರು 10 ಮಿಲಿಯನ್ ಜನರು ಹೊಸ ಮನೆಗಳಿಗೆ ತೆರಳಿದರು ಮತ್ತು 27 ಮಿಲಿಯನ್ ಜನತೆಯ ಮನೆ ನವೀಕರಿಸಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 1.6 ಟ್ರಿಲಿಯನ್ ಯುವಾನ್ ( 250 ಬಿಲಿಯನ್) ಖರ್ಚು ಮಾಡಿದೆ ಎಂದಿದ್ದಾರೆ.

ಚೀನಾವು ಒಟ್ಟು 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಕಳೆದ 8 ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿದ್ದ 9.89 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ. 832 ಸಣ್ಣ ಗ್ರಾಮಗಳು ಮತ್ತು 1,28,000 ಗ್ರಾಮಗಳನ್ನು ಬಡತನ ರೇಖೆಯಿಂದ ಹೊರತರುವಂತಹ ಮೂಲ ಸೌಕರ್ಯ ಒದಗಿಸಲಾಗಿ, ಅವರು ಬಡತನದಿಂದ ಮುಕ್ತಗೊಂಡಿದ್ದಾರೆ ಎಂದು ಕ್ಸಿ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...