ಕೇರಳ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರರಾಗಿ ರಾಜ್ಯಸಭಾ ಸದಸ್ಯರಾಗಿದ್ದ ಮಲಯಾಳಂ ಸೂಪರ್ ಸ್ಟಾರ್ ಸುರೇಶ್ ಗೋಪಿ ಚುನಾವಣಾ ಕಣಕ್ಕೆ ಮೊದಲ ಬಾರಿಗೆ ಅಖಾಡಕ್ಕೆ ಎಂಟ್ರಿ ನೀಡ್ತಾ ಇದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರ ಪ್ರಚಾರ ನಡೆಸಿದ್ದರು ಸುರೇಶ್ ಗೋಪಿ. ಬಳಿಕ ರಾಜ್ಯಸಭೆ ಸದಸ್ಯರಾಗಿದ್ದರು.
ಬಿಜೆಪಿ ತ್ರಿಸ್ಸೂರ್ ಸೇರಿ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದೆ. ಎನ್ಡಿಎ ಮಿತ್ರಪಕ್ಷದ ಅಭ್ಯರ್ಥಿಯಾಗಿ ಸುರೇಶ್ ಗೋಪಿ ಅವರಿಗೆ ತ್ರಿಸ್ಸೂರಿನಿಂದ ಟಿಕೆಟ್ ಘೋಷಿಸಿದೆ ಕಮಲ ಪಾಳಯ.
ಭಾರತ್ ಧರ್ಮ ಜನ ಸೇನಾ ಪಕ್ಷದ ಅಭ್ಯರ್ಥಿಯಾಗಿರುವ ಸುರೇಶ್ ಹೆಸರು ವಯನಾಡು ಕ್ಷೇತ್ರಕ್ಕೆ ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸೆಣಸಲು ಬಿಡಿಜೆಎಸ್ ಪಕ್ಷದ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ ಅವರ ಹೆಸರನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸೂಚಿಸಿದ್ದಾರೆ.
ತ್ರಿಸ್ಸೂರ್ ಕ್ಷೇತ್ರಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂಟಿ ರಮೇಶ್ ಅವರ ಹೆಸರು ಕೂಡಾ ಕೇಳಿ ಬಂದಿತ್ತು. ಆದರೆ, ಗೋಪಿ ಹೆಸರನ್ನು ಅಂತಿಮಗೊಳಿಸಲಾಗಿದೆ. ತ್ರಿಸ್ಸೂರಿನಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಟಿ.ಎನ್ ಪ್ರತಾಪನ್ ಹಾಗೂ ಎಲ್ ಡಿಎಫ್ ಅಭ್ಯರ್ಥಿಯಾಗಿ ರಾಜಾಜಿ ಮಾಥ್ಯೂ ಥಾಮಸ್ ಹೋರಾಟದ ಕಣದಲ್ಲಿದ್ದಾರೆ.
ಚುನಾವಣಾ ಅಖಾಡಕ್ಕೆ ಇಳಿದ ಸ್ಟಾರ್ ನಟ..!
Date: