ಚೆಕ್‌ಪೋಸ್ಟ್ ನ ಭಯಂಕರ ಅಪಘಾತ! ತಪ್ಪು ಯಾರದ್ದು?

Date:

ರಾಜ್ಯಾದ್ಯಂತ ಟಫ್ ಲಾಕ್ ಡೌನ್ ರೂಲ್ಸ್ ಜಾರಿಯಲ್ಲಿದೆ. ಎಲ್ಲಾ ಕಡೆ ಪೊಲೀಸರು ಗಾಡಿಗಳನ್ನು ನಿಲ್ಲಿಸಿ ಪರಿಶೀಲಿಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಸೀಜ್ ಮಾಡಿ ವಾಹನ ಸವಾರರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇಷ್ಟೆಲ್ಲಾ ನಿಯಮ ಜಾರಿಯಲ್ಲಿದ್ದರೂ ಸಹ ಕೆಲವೊಂದಿಷ್ಟು ಜನ ಲಾಕ್ ಡೌನ್ ಸಮಯದಲ್ಲಿಯೂ ಬೈಕ್ ತೆಗೆದುಕೊಂಡು ಸವಾರಿ ಮಾಡುತ್ತಿದ್ದಾರೆ. ಕೆಲವರು ಏನೂ ಕೆಲಸ ಇಲ್ಲದಿದ್ದರೂ ಸಹ ನೆಪ ಹೇಳಿ ಗಾಡಿಗಳಲ್ಲಿ ಸುತ್ತುತ್ತಿದ್ದರೆ, ಇನ್ನೂ ಕೆಲವು ಜನರು ಆಸ್ಪತ್ರೆ, ಬ್ಯಾಂಕು ಮತ್ತು ಇನ್ನಿತರ ಹೋಗಲೇ ಬೇಕಾದ ಸ್ಥಳಗಳಿಗೆ ತೆರಳುತ್ತಿದ್ದಾರೆ.

 

 

ಸದ್ಯ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಈ ಓಡಾಟದ ಕುರಿತು ದೊಡ್ಡ ಮಟ್ಟದಲ್ಲಿ ಗೊಂದಲ ಉಂಟಾಗಿದೆ. ತೀರಾ ಅಗತ್ಯದ ಕೆಲಸಗಳಿಗೆ ಓಡಾಡಬಹುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಸ್ಥಳೀಯ ಕಾನ್ಸ್ಟೇಬಲ್ ಗಳು ಕೇಳಬೇಕಲ್ಲ, ಯಾವುದೇ ಕಾರಣಕ್ಕೂ ಗಾಡಿಯನ್ನು ಹೊರಗೆ ತರಲೇಬಾರದು, ಆಸ್ಪತ್ರೆಗೆ ಹೋಗಬೇಕಾದರೆ ನಡೆದುಕೊಂಡೇ ಹೋಗಬೇಕು ಅಂತ ತಮ್ಮದೇ ನಿಯಮಗಳನ್ನು ಜಾರಿ ಮಾಡಿಕೊಂಡುಬಿಟ್ಟಿದ್ದಾರೆ.

 

ಪೊಲೀಸರ ಈ ಹಲವಾರು ನಿಯಮಗಳಿಂದ ಗೊಂದಲಕ್ಕೀಡಾಗಿರುವ ಸಾರ್ವಜನಿಕರು ಪೊಲೀಸರ ಕಣ್ಣು ತಪ್ಪಿಸಿ ವಾಹನ ಚಲಾಯಿಸಲು ಶುರುಮಾಡಿದ್ದಾರೆ. ಇದೇ ರೀತಿ ಇಂದು ಬೆಳಿಗ್ಗೆ ಬೆಳಗಾವಿಯ ಖಾನಾಪುರ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಒಬ್ಬ ವೇಗವಾಗಿ ಬರುತ್ತಿದ್ದ ಬೈಕ್ ತಡೆಯಲು ಗೇಟ್ ಮುಚ್ಚಿದ್ದ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನ ಸವಾರ ಇನ್ನೂ ವೇಗವಾಗಿ ಗೇಟ್ ದಾಟಲು ಮುಂದಾಗಿದ್ದಾನೆ. ಗೇಟ್ ಬಳಿ ಇದ್ದ ಪೋಲೀಸ್ ನಿಲ್ಲಿಸು ನಿಲ್ಲಿಸು ಎಂದು ಕೈ ಸನ್ನೆ ಮಾಡಿತು ಬಿಟ್ಟರೆ ಗೇಟ್ ಮೇಲೆತ್ತುವ ಕೆಲಸಕ್ಕೆ ಮುಂದಾಗಲೇ ಇಲ್ಲ. ಈ ಘಟನೆಯ ವಿಡಿಯೋ ಕೆಳಗಡೆ ಇದೆ ನೋಡಿ..

 

 

ವಾಹನ ಸವಾರ ಅಷ್ಟು ವೇಗದಲ್ಲಿ ಬರುತ್ತಿದ್ದನ್ನು ನೋಡುತ್ತಿದ್ದ ಆ ಪೋಲಿಸ್ ಗೇಟ್ ಮೇಲೆತ್ತದೆ ಇದ್ದ ಕಾರಣ ಮುಂಬದಿಯ ಬಗ್ಗೆ ಗೇಟ್ ನಿಂದ ಗಾಡಿಯನ್ನು ಮುಂದಕ್ಕೆ ಓಡಿಸಿ ಬಿಟ್ಟಿದ್ದಾನೆ ಆದರೆ ಹಿಂಬದಿಯ ಸವಾರ ಗೇಟ್ ಗೆ ಮುಖ ಹೊಡೆಸಿಕೊಂಡು ಹಾರಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ತಪ್ಪು ಯಾರದ್ದು ಎಂಬ ಪ್ರಶ್ನೆ ಮೂಡಿದೆ?

 

 

ಪೊಲೀಸ್ ನಿಲ್ಲಿಸು ಎಂದರು ನಿಲ್ಲಿಸದೆ ಗಾಡಿಯನ್ನು ವೇಗವಾಗಿ ಓಡಿಸಿದ ಸವಾರನ ತಪ್ಪಾ? ಅಥವಾ ಅಷ್ಟು ವೇಗದಲ್ಲಿ ಗಾಡಿ ಬರುತ್ತಿದೆ ಆತ ನಿಲ್ಲಿಸುವುದಿಲ್ಲ ಎಂದು ಗೊತ್ತಾದ ಮೇಲೂ ಗೇಟ್ ನ್ನು ಮೇಲೆತ್ತದೆ ಕೈಸನ್ನೆ ಮಾಡುತ್ತಾ ನಿಂತ ಪೋಲಿಸ್ ತಪ್ಪಾ? ಒಟ್ಟಿನಲ್ಲಿ ಈ ಎಲ್ಲಾ ತಪ್ಪು ಒಪ್ಪುಗಳ ನಡುವೆ ಪ್ರಾಣ ಕಳೆದುಕೊಂಡಿದ್ದು ಹಿಂಬದಿಯ ಸವಾರ. ಸದ್ಯ ಈ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಓದುತ್ತಿರುವ ಓದುಗರಿಗೂ ಅಷ್ಟೆ ಎಲ್ಲಾದರೂ ಪೊಲೀಸರು ಗಾಡಿ ನಿಲ್ಲಿಸಿ ಎಂದರೆ ನಿಲ್ಲಿಸಿಬಿಡಿ. ಕೆಲವೊಂದಿಷ್ಟು ದುಡ್ಡು ಅಥವಾ ಗಾಡಿ ಸೀಸ್ ಮಾಡುತ್ತಾರೆ ಬಿಟ್ಟರೆ ಬೇರೇನೋ ಲಾಸ್ ಆಗುವುದಿಲ್ಲ ಆದರೆ ಈ ರೀತಿ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ಹೋದರೆ ನಿಮ್ಮ ಕುಟುಂಬದವರ ಗತಿ ಏನು?

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....