ಟೀಮ್ ಇಂಡಿಯಾದ ಯುವ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಚೊಚ್ಚಲ ಏಕದಿನ ಶತಕ ಬಾರಿಸಿ ಮಿಂಚಿದ್ದಾರೆ. ಕನ್ನಡಿಗ ರಾಹುಲ್ ಮತ್ತೆ ಓಪನಿಂಗ್ನಿಂದ ಮಧ್ಯಮ ಕ್ರಮಾಂಕಕ್ಕೆ ಬಂದಿದ್ದು, 5ನೇ ಕ್ರಮಾಂಕದಲ್ಲಿಯೂ ಬ್ಯಾಟ್ ಬೀಸಿ ಮಿಂಚಿದ್ದಾರೆ.
ಹ್ಯಾಮಿಲ್ಟನ್ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ಗಳ ಬೆವರಿಳಿಸಿದ ಶ್ರೇಯಸ್ ಅಯ್ಯರ್ 107 ಬಾಲ್ಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 103ರನ್ ಬಾರಿಸಿದರು. ಬಳಿಕಸ ಟೀಮ್ ಸೌಥಿಗೆ ವಿಕೆಟ್ ಒಪ್ಪಿಸಿದ್ರು.
ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಪೃಥ್ವಿ ಶಾ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಈ ಹೊಸ ಆರಂಭಿಕ ಜೋಡಿ 50ರನ್ ಜೊತೆಯಾಟವಾಡಿತು. ಪೃಥ್ವಿ ಶಾ 20 ರನ್ ಬಾರಿಸಿ ಔಟಾದರು. ಮತ್ತೆ ತಂಡಕ್ಕೆ ನಾಲ್ಕು ರನ್ ಸೇರುವಷ್ಟರಲ್ಲಿ ಮಯಾಂಕ್ ಪೆವಿಲಿಯನ್ ಸೇರಿದ್ರು. ನಂತರ ಜೊತೆಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ 104ರನ್ ಜೊತೆಯಾಟವಾಡಿದ್ರು. ಕೊಹ್ಲಿ 51ರನ್ ಬಾರಿಸಿ ಪೆವಿಲಿಯನ್ ಸೇರಿದ್ರೆ, ಅಯ್ಯರ್ 103 ರನ್ ಬಾರಿಸಿದ್ರು. 5ನೇ ಕ್ರಮಾಂಕದಲ್ಲಿ ಬಂದ ಕನ್ನಡಿಗ ಕೆ.ಎಲ್ ರಾಹುಲ್ ಅಜೇಯ 88 ರನ್ ಬಾರಿಸಿ ಅದ್ಭುತ ಪ್ರದರ್ಶನ ಮುಂದುವರೆಸಿದ್ರು. ಕೇದಾರ್ ಜಾದವ್ ಅಜೇಯ 26ರನ್ ಕೊಡುಗೆ ನೀಡಿದರು. ಭಾರತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 347 ರನ್ ಮಾಡಿತು.
ಚೊಚ್ಚಲ ಶತಕ ಬಾರಿಸಿದ ಶ್ರೇಯಸ್ ; 5 ಕ್ರಮಾಂಕದಲ್ಲೂ ರಾಹುಲ್ ಅಬ್ಬರ..!
Date: