ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪದ ಮೇಲೆ ಕ್ರಿಕೆಟಿಗ ಎಸ್. ಶ್ರೀಶಾಂತ್ ಗೆ ಬಿಸಿಸಿಐ ನ ಶಿಸ್ತು ಸಮಿತಿ ವಿಧಿಸಿದ್ದ ಆಜೀವ ನಿಷೇಧ ಶಿಕ್ಷೆಯ ಆದೇಶವನ್ನು ಸುಪ್ರೀಂಕೋರ್ಟ್ ತೆರವು ಮಾಡಿದೆ. ಇದರಿಂದ ಶ್ರೀ ‘ಶಾಂತ’ರಾಗಿದ್ದಾರೆ. ಜೀವದಾನ ಸಿಕ್ಕಂತಾಗಿದೆ..!
2005 ರಿಂದ 2013 ರ ತನಕ ಭಾರತದ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಬೌಲರ್ ಶ್ರೀಶಾಂತ್. 2007 ರ ಟಿ20 ಮತ್ತು 2011 ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಶ್ರೀಶಾಂತ್ ಸ್ಪಾರ್ಟ್ ಫಿಕ್ಸಿಂಗ್ ಪ್ರಕಣದಲ್ಲಿ ಆಜೀವ ನಿಷೇಧಕ್ಕೆ ಒಳಗಾದ ಶ್ರೀ ತಮ್ಮ ಕ್ರಿಕೆಟ್ ಜೀವನದ ಅಮೂಲ್ಯ 6 ವರ್ಷಗಳನ್ನು ಕಳೆದುಕೊಂಡಿದ್ದಾರೆ.
ಬಿಸಿಸಿಐ ವಿಧಿಸಿದ್ದ ಅಜೀವ ನಿಷೇಧ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಶ್ರೀಶಾಂತ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಕೆ.ಎಂ ಜೋಸೆಫ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠ ಆಜೀವ ನಿಷೇಧ ಶಿಕ್ಷೆ ಆದೇಶವನ್ನು ತೆರವುಗೊಳಿಸಿದೆ. ಮೂರು ತಿಂಗಳೊಳಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವಂತೆ ಬಿಸಿಸಿಐ ಗೆ ನಿರ್ದೇಶನ ನೀಡಿದೆ..
ಸುಪ್ರೀಂಕೋರ್ಟ್ ನಂಗೆ ಜೀವದಾನ ನೀಡಿದೆ ಎಂದು ಸಂತಸ ಪಟ್ಟಿರುವ ಶ್ರೀಶಾಂತ್. ಮತ್ತೆ ಟೀಂ ಇಂಡಿಯಾ ಪರ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ’42ರ ಹರೆಯದಲ್ಲಿ ಲಿಯಾಂಡರ್ ಪೇಸ್ ಗ್ರ್ಯಾನ್ ಸ್ಲಾಂ ಗೆಲ್ಲುತ್ತಾರೆಂದರೆ , 36ನೇ ವಯಸ್ಸಿನಲ್ಲಿ ನಾನು ಸ್ವಲ್ಪವಾದರೂ ಕ್ರಿಕೆಟ್ ಆಡಬಲ್ಲೆ’ ಎಂದಿದ್ದಾರೆ. ಇದು ಶ್ರೀಶಾಂತ್ ಆತ್ಮವಿಶ್ವಾಸ…