ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಹೆಚ್ಚಿನ ಸೀಟುಗಳನ್ನು ಗಳಿಸಿ ಸರ್ಕಾರ ರಚನೆಗೆ ಸಿದ್ಧವಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 8 ರ ಶನಿವಾರ ಸಂಜೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ಮೂಲಕ ನರೇಂದ್ರ ಮೋದಿಯವರು 3 ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಇಂದು ಸಂಜೆ ರಾಷ್ಟ್ರಪತಿಗಳಿಗೆ ಎನ್‌ಡಿಎ ಮೈತ್ರಿಕೂಟದ ಬೆಂಬಲ ಪತ್ರ ನೀಡುವ ಸಾಧ್ಯತೆ ಇದೆ. ಇಂದು ಪ್ರಧಾನಿ ಮೋದಿ ಕೊನೆಯದಾಗಿ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದರು. ಇಂದಿಗೆ 17 ಲೋಕಸಭೆ ವಿಸರ್ಜನೆ ಮಾಡಲಾಗಿದೆ.
ಜೂನ್ 8ರಂದು ಪ್ರಧಾನಿ ಮೋದಿ ಪ್ರಮಾಣವಚನ ?
Date: