ಜೆಡಿಎಸ್ ನಮ್ಮೊಂದಿಗೆ ಕೈ ಜೋಡಿಸಿರುವುದು ಶಕ್ತಿ ಬಂದಂತಾಗಿದೆ: ಬಿ. ವೈ. ರಾಘವೇಂದ್ರ

1 Min Read

ಶಿವಮೊಗ್ಗ: ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಕೈ ಜೋಡಿಸಿರುವುದು ನೂರಕ್ಕೆ ನೂರು ನಮಗೆ ಶಕ್ತಿ ಬಂದಂತಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮೊದಲನೇ ಲೋಕಸಭಾ ಚುನಾವಣೆಯಲ್ಲಿ 50 ಸಾವಿರ, ಎರಡನೇ ಚುನಾವಣೆಯಲ್ಲಿ 70 ಸಾವಿರ, ಮೂರನೇ ಚುನಾವಣೆಯಲ್ಲಿ 2 ಲಕ್ಷದ 35 ಸಾವಿರ ಮತಗಳ ಅಂತರದಿಂದ ಜನ ಆಶೀರ್ವಾದ ಮಾಡಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಮತದಾರರ ವಿಶ್ವಾಸ ಹೆಚ್ಚಾಗುತ್ತಿದೆ. ಈ ಕಳೆದ ಬಾರಿ ಕೊಟ್ಟ ಲೀಡ್ ಮೀರಿ ಹೆಚ್ಚು ಮತಗಳ ಅಂತರದಿಂದ ಈ ಬಾರಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ. ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಕೈ ಜೋಡಿಸಿರುವುದು ನೂರಕ್ಕೆ ನೂರು ನಮಗೆ ಶಕ್ತಿ ಬಂದಂತಾಗಿದೆ ಎಂದರು.

Share This Article