No menu items!
12.1 C
Munich
Wednesday, May 20, 2026

ಕೊಪ್ಪಳ ಜಿಲ್ಲೆಯಲ್ಲಿ ಅದ್ದೂರಿ ಮತದಾನ: ಬಲೂನ್, ಚಿತ್ರಗಳಿಂದ ಶೃಂಗಾರಗೊಂಡ ಮತಗಟ್ಟೆ..!

Must read

ಕೊಪ್ಪಳ:- ಕೊಪ್ಪಳ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯಲು ವಿನೂತನ ಪ್ರಯತ್ನವನ್ನು ಕೊಪ್ಪಳ ಜಿಲ್ಲಾಡಳಿತ ಮಾಡಿಕೊಂಡಿದೆ. ಇಡೀ ಮತಗಟ್ಟೆಯನ್ನು ಅನೇಕ ಚಿತ್ರಗಳಿಂದ, ಬಲೂನ್​ಗಳಿಂದ ಅಲಂಕಾರ ಮಾಡಲಾಗಿದೆ.

ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯನ್ನು ಯುವ ಮತಗಟ್ಟೆಯನ್ನಾಗಿ ಮಾಡಲಾಗಿದ್ದು, ಇಡೀ ಮತಗಟ್ಟೆಯನ್ನು ಅಲಂಕಾರ ಮಾಡಲಾಗಿದೆ. ಮತಗಟ್ಟೆ ಹೊರಗಡೆ ದೊಡ್ಡ ಕಟೌಟ್ ಹಾಕಲಾಗಿದ್ದು, ನಮ್ಮ ಮತ ನಮ್ಮ ಹಕ್ಕು, ನಮ್ಮ ನಡೆ ಮತಗಟ್ಟೆ ಕಡೆ, ಚುನಾವಣೆ ಪರ್ವ ದೇಶದ ಗರ್ವ ಅನ್ನೋ ಬರಹಗಳನ್ನು ಬರೆಸಲಾಗಿದೆ. ಇನ್ನು ಕಟ್ಟಡದ ಒಳ ಹೋಗುತ್ತಿದ್ದಂತೆ ಬಲೂನ್​ಗಳಿಂದ ಅಲಂಕಾರ ಮಾಡಲಾಗಿದೆ. ಇಡೀ ಕಟ್ಟಡವನ್ನು ಅನೇಕ ಚಿತ್ರಗಳಿಂದ ಅಲಂಕಾರ ಮಾಡಲಾಗಿದೆ.

ಕೊಪ್ಪಳದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಯುವಕರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಒಂದೊಂದು ಯುವ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎನ್ನಲಾಗಿದೆ.

- Advertisement -spot_img

More articles

- Advertisement -spot_img

Latest article