ನಿನ್ನೆಯಷ್ಟೇ ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಚಿತ್ರದ ಪ್ರೀಮಿಯರ್ ಶೋ ಅನ್ನು ಆಯೋಜಿಸಲಾಗಿತ್ತು ಈ ಶೋ ವೀಕ್ಷಿಸಲು ಜೈ ಜಗದೀಶ್ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಅವರು ಸಹ ತೆರಳಿದ್ದರು. ಚಿತ್ರ ವೀಕ್ಷಿಸಿದ ನಂತರ ಮಾಧ್ಯಮದವರೊಡನೆ ಮಾತನಾಡಿದ ವಿಜಯಲಕ್ಷ್ಮಿ ಸಿಂಗ್ ಅವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ತದನಂತರ ಬಿಗ್ ಬಾಸ್ ಕುರಿತಾಗಿಯೂ ಮಾತನಾಡಿದರು.
ಬಿಗ್ ಬಾಸ್ ಮನೆಯಲ್ಲಿ ತಮ್ಮ ಪತಿ ಜೈಜಗದೀಶ್ ಅವರು ಎಮೋಷನ್ ಆಗಿದ್ದನ್ನು ಕಂಡು ವಿಜಯಲಕ್ಷ್ಮಿ ಸಿಂಗ್ ಅವರು ಸಹ ಆಶ್ಚರ್ಯ ರಾಗಿದ್ದಾರೆ. ಅವರು ಈ ರೀತಿ ಬಿಕ್ಕಿ ಬಿಕ್ಕಿ ಅತ್ತಿದ್ದನ್ನು ನಾನು ಎಂದೂ ನೋಡಿರಲಿಲ್ಲ ಅವರಲ್ಲಿ ತುಂಬಾ ಬದಲಾವಣೆಯನ್ನು ಬಿಗ್ ಬಾಸ್ ಮನೆಯಲ್ಲಿ ನಾನು ಕಾಣುತ್ತಿದ್ದೇನೆ ಎಂದು ವಿಜಯಲಕ್ಷ್ಮಿ ಸಿಂಗ್ ಅವರು ಹೇಳಿದರು ಮತ್ತು ಹೊಸ ಮನುಷ್ಯನಾಗಿ ಜೈ ಜಗದೀಶ್ ಅವರು ಆಚೆ ಬರಲಿ ಎಂದು ವಿಜಯಲಕ್ಷ್ಮಿ ಸಿಂಗ್ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.