ಟಿಕ್ ಟಾಕ್ ನಿಂದ ಮನರಂಜನೆ ಎಷ್ಟು ಮಟ್ಟಕ್ಕೆ ಸಿಗುತ್ತದೆಯೋ ಅಷ್ಟೇ ಮಟ್ಟದಲ್ಲಿ ತೊಂದರೆಗಳು ಮತ್ತು ಅನಾಹುತಗಳು ಸಹ ಸಂಭವಿಸುತ್ತಿವೆ. ಟಿಕ್ ಟಾಕ್ ಮಾಡಲು ಹೋಗಿ ಇತ್ತೀಚೆಗಷ್ಟೇ ದೆಹಲಿಯಲ್ಲಿ ಯುವಕನೋರ್ವ ಗುಂಡೇಟಿಗೆ ಬಲಿಯಾಗಿದ್ದು ನಮಗೆಲ್ಲರಿಗೂ ತಿಳಿದೇ ಇದೆ. ಇದೀಗ ಹೊಸಕೋಟೆ ಲಾಡ್ಜ್ ಒಂದರಲ್ಲಿ ಕಿರಣ್ ಎಂಬ ಯುವಕ ಟಿಕ್ ಟಾಕ್ ಮಾಡಿ ತದನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಂಬಳೀಪುರ ನಿವಾಸಿ ಕಿರಣ್ ಹೊಸಕೋಟೆಯ ಲಾಡ್ಜ್ ವೊಂದರಲ್ಲಿ ಬುಧವಾರ ರಾತ್ರಿ ರೂಂ ಮಾಡಿಕೊಂಡು ಹೋಗಿದ್ದಾನೆ ಆದರೆ ಗುರುವಾರ ಬೆಳಿಗ್ಗೆ 9 ಗಂಟೆ ಆದರೂ ಸಹ ರೂಮ್ ಸರ್ವೀಸ್ ಬಾಯ್ ಬಾಗಿಲು ಬಡಿದರೂ ಕಿರಣ್ ಬಾಗಿಲು ತೆರೆಯದ್ದನ್ನು ಕಂಡು ಒಳ ಪ್ರವೇಶಿಸಲಾಗಿದೆ. ಹೀಗೆ ಆದ ಒಳಗಡೆ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದಿದೆ ಕಿರಣ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಟಿಕ್ ಟಾಕ್ ನಲ್ಲಿ “ನಾನು ನನ್ನ ತಾಯಿಗೆ ಒಬ್ಬನೇ ಮಗ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾನೆ. ಆದರೆ ಆತ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವಿಷಯ ಮಾತ್ರ ತಿಳಿಸಿಲ್ಲ.