ಕನ್ನಡಿಗ ಕೃಷ್ಣಪ್ಪ ಗೌತಮ್..ಅಲಿಯಾಸ್ ಕೆ.ಗೌತಮ್ ಟಿ20 ಇತಿಹಾಸದಲ್ಲಿಯೇ ಯಾರೂ ಮಾಡದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ ಶಿವಮೊಗ್ಗ ಲಯನ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ನಡುವಿನ ಪಂದ್ಯ ಗೌತಮ್ ದಾಖಲೆಯ ವೇದಿಕೆಯಾಗಿತ್ತು. ಇದಕ್ಕೆ ಸಾಕ್ಷಿಯಾಗಿದ್ದು ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ.
ಯೆಸ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ನ ಗೌತಮ್ ಆರಂಭದಲ್ಲಿ ಶಿವಮೊಗ್ಗದ ಬೌಲರ್ ಗಳನ್ನು ಕಾಡಿದ್ರೆ, ನಂತರ ಬ್ಯಾಟ್ಸ್ ಮನ್ ಗಳನ್ನು ಇನ್ನಿಲ್ಲದಂತೆ ಕಾಡಿದ್ರು. ಅದ್ಭುತ ಆಲ್ ರೌಂಡ್ ಆಟದ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಳ್ಳಾರಿ ಟಸ್ಕರ್ಸ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಅಭಿಷೇಕ್ ರೆಡ್ಡಿ 34, ನಾಯಕ ಸಿಎಂ ಗೌತಮ್ 13 ರನ್ ಸೇರಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಕೆ ಗೌತಮ್ 56 ಎಸೆತಗಳಲ್ಲಿ ಅಜೇಯ 134 ರನ್ ಬಾರಿಸಿದರು. 13 ಸಿಕ್ಸರ್ ಮತ್ತು 7 ಬೌಂಡರಿಗಳು ಅವರ ಮನಮೋಹಕ ಇನ್ನಿಂಗ್ಸ್ ನಲ್ಲಿತ್ತು.
ಟಸ್ಕರ್ಸ್ ಇನ್ನಿಂಗ್ಸ್ ವೇಳೆ ಮಳೆ ಶುರುವಾಗಿದ್ದರಿಂದ ಪಂದ್ಯವನ್ನು 17 ಓವರ್‌ಗೆ ಕಡಿತಗೊಳಿಸಲಾಯ್ತು. ಬಳ್ಳಾರಿ ಟಸ್ಕರ್ಸ್ 17 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 203 ರನ್ ಪೇರಿಸಿತು. ಶಿವಮೊಗ್ಗ ಲಯನ್ಸ್‌ಗೆ ವಿಜೆಡಿ ನಿಯಮದ ಪ್ರಕಾರ 17 ಓವರ್‌ಗೆ 204 ರನ್ ಗುರಿ ನೀಡಲಾಗಿತ್ತು.
ಬ್ಯಾಟಿಂಗ್ ಗೆ ಇಳಿದ ಶಿವಮೊಗ್ಗಕ್ಕೂ ಕೆ. ಗೌತಮ್ ಕಾಡಿದರು. ಕೇವಲ 15 ರನ್ ನೀಡಿ 8 ವಿಕೆಟ್ ಕಿತ್ತರು. ಶಿವಮೊಗ್ಗ ಪರ ಪವನ್ ದೇಶಪಾಂಡೆ (46) ಮತ್ತು ಅಕ್ಷಯ್ ಬಲ್ಲಾಳ್ (40) ಮಾತ್ರ ಹೋರಾಟ ನಡೆಸಿದರು. ಅಂತಿಮವಾಗಿ 16.3 ಓವರ್ ಗಳಲ್ಲಿ ಶಿವಮೊಗ್ಗ 133 ರನ್ ಗಳಿಗೆ ಆಲ್ ಔಟ್ ಆಯಿತು..!
134 ರನ್ ಮಾಡಿ 8 ವಿಕೆಟ್ ಕಿತ್ತು ಆಲ್ ರೌಂಡ್ ಪ್ರದರ್ಶನ ನೀಡಿದ ಪಂದ್ಯ ಶ್ರೇಷ್ಠ ಗೌತಮ್ ಟಿ20 ಇತಿಹಾಸದಲ್ಲಿಯೇ ವಿಶೇಷ ದಾಖಲೆ ಬರೆದಿದ್ದಾರೆ.
ಟಿ20 ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಕನ್ನಡಿಗ ಗೌತಮ್..!
Date: