ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆ ಖಚಿತವಾಗುತ್ತಿದ್ದಂತೆ. ಸಾಕಷ್ಟು ವೈರಲ್ ಆಗಿರುವ ಮಾತು ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವುದು. ಇದು ಎಲ್ಲಾ ಕಡೆ ಸೌಂಡು ಮಾಡುತ್ತಿರುವ ಮಾತಾಗಿದೆ.
ಈ ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಡೈಲಾಗ್ ಈಗ ವಿಶ್ವಕಪ್ ಟೀಮ್ ಇಂಡಿಯಾಕ್ಕೂ ಕಾಲಿಟ್ಟಿದೆ. ಟೀಮ್ ಇಂಡಿಯಾದಲ್ಲೂ ನಿಖಿಲ್ ಎಲ್ಲಿದ್ದಿಯಪ್ಪಾ ಸದ್ದು ಜೋರಾಗಿದೆ.
ವಿಶ್ವಕಪ್ ಆಡಲಿರುವ ಟೀಮ್ ಇಂಡಿಯಾದ ಆಟಗಾರರ ಹೆಸರನ್ನು ಒಂದರ ಕೆಳಗೆ ಒಂದು ಜೋಡಿಸಿ, ಅದರಿಂದ ಒಂದೊಂದು ಅಕ್ಷರ ತೆಗೆದುಕೊಂಡು ನಿಖಿಲ್ ಎಲ್ಲಿದ್ದಿಯಪ್ಪಾ ಎಂದು ಜೋಡಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಎಲ್ಲಿದ್ದಿಯಪ್ಪಾ ನಿಖಿಲ್ ಎಂದು ಕರೆದಿದ್ದರು. ಆಗ ನಿಖಿಲ್ ನಿಮ್ಮನ್ನು ಮತ್ತು ತಾತನನ್ನುಜೀವಕ್ಕಿಂತ ಹೆಚ್ಚು ಪ್ರೀತಿಸುವ ಈ ಜನರ ಮಧ್ಯೆ ಇದ್ದೀನಿ ಎಂದಿದ್ದರು. ಅದು ಬೇರೆ ಬೇರೆ ರೀತಿಯಲ್ಲಿ ಟ್ರೋಲಿಗರಿಗೆ ಆಹಾರವಾಗಿದೆ.
ಟೀಂ ಇಂಡಿಯಾದಲ್ಲೂ ಸದ್ದು ಮಾಡ್ತಿದೆ ನಿಖಿಲ್ ಎಲ್ಲಿದ್ದಿಯಪ್ಪಾ?
Date: