ಸದ್ಯ ಟೀಮ್ ಇಂಡಿಯಾಕ್ಕೆ ವಿರಾಟ್ ಕೊಹ್ಲಿಯವರೇ ನಾಯಕ. ಆದರೆ ಅವರನ್ನೂ ಮೀರಿದ ಸೂಪರ್ ಕ್ಯಾಪ್ಟನ್ ಒಬ್ಬರು ಟೀಮ್ ಇಂಡಿಯಾದಲ್ಲಿದ್ದಾರೆ. ಅವರು ಬೇರಾರೂ ಅಲ್ಲ, ಕೊಹ್ಲಿಯವರ ಧರ್ಮಪತ್ನಿ ಅನುಷ್ಕಾ ಶರ್ಮಾ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಯಾವತ್ತೂ ಇಂಥಾದ್ದೊಂದು ಬೆಳವಣಿಗೆ ನಡೆದಿರಲಿಲ್ಲ. ಏಕೆಂದರೆ ಸದ್ಯ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ಸೂಪರ್ ಕ್ಯಾಪ್ಟನ್ ಆಗಿ ತಂಡವನ್ನ ನಿಯಂತ್ರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ವಿಷಯ ಇಷ್ಟೆ, ಕಳೆದ ಏಷ್ಯಾ ಕಪ್ ಸೀರಿಸ್ನಲ್ಲಿ ಮ್ಯಾನ್ ಆಫ್ ದಿ ಸೀರಿಸ್ ಆಗಿದ್ದ ಶಿಖರ್ ಧವನ್ ಅದ್ಭುತ ಫಾರ್ಮ್ನಲ್ಲಿದ್ದರು. ಇಂಗ್ಲೆಂಡ್ ವಿರುದ್ಧ ನಡೆದ ಸೀರಿಸ್ನಲ್ಲಿ ಶೀಖರ್ ಧವನ್ ಎರಡು ಶತಕ ಸೇರಿದಂತೆ 342 ರನ್ ಗಳಿಸಿದ್ದರು. ಹೀಗಿದ್ರೂ ಕಾರಣವೇ ಇಲ್ಲದೇ ವೆಸ್ಟ್ ಇಂಡೀಸ್ ಸೀರಿಸ್ಗೆ ಅವರನ್ನ ಕೈಬಿಡಲಾಗಿದೆ. ಇದರ ಹಿಂದೆ ಸೂಪರ್ ಕ್ಯಾಪ್ಟನ್ ಅನುಷ್ಕಾ ಶರ್ಮಾ ಕೈವಾಡ ಇದೆ ಎನ್ನಲಾಗುತ್ತಿದೆ.
ಕೊಹ್ಲಿ ಪತ್ನಿ ಅನುಷ್ಕಾ ಹಾಗೂ ಧವನ್ ಪತ್ನಿ ಆಯೇಷಾ ಇಬ್ಬರೂ ಗೆಳತಿಯರು. ಇಂಗ್ಲೆಂಡ್ ವಿರುದ್ಧ ನಡೆದ ಲಂಡನ್ನಲ್ಲಿ ನಡೆದ ಪಂದ್ಯವನ್ನ ಅಕ್ಕ ಪಕ್ಕ ಕುಳಿತುಕೊಂಡೇ ನೋಡಿದ್ದರು. ಆ ಪಂದ್ಯದ ವೇಳೆ ಇಬ್ಬರ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗುತ್ತಿದೆ. ಆ ಗಲಾಟೆಯ ಬಳಿಕ ತಂಡದಲ್ಲಿ ಶಿಖರ್ ಧವನ್ ಅವರನ್ನ ನಿರ್ಲಕ್ಷ್ಯ ಮಾಡಲಾಗಿತ್ತು. ಅದಾದ ಬಳಿಕ ತಂಡದ ಆಯ್ಕೆ ವಿಚಾರದಲ್ಲಿ ಅನುಷ್ಕಾ ಶರ್ಮಾ ಮೂಗು ತೂರಿಸಿದ್ದರು ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಧವನ್ ಅವರನ್ನ ವೆಸ್ಟ್ ಇಂಡೀಸ್ ಸೀರಿಸ್ಗೆ ಆಯ್ಕೆ ಮಾಡಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳ ಸಭೆಯಲ್ಲಿ ಕೊಹ್ಲಿ ಜೊತೆಯಲ್ಲಿ ಅನುಷ್ಕಾ ಶರ್ಮಾ ಕೂಡ ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಆಟಗಾರರು ಬಿಸಿಸಿಐ ಮುಂದೆ ತಮ್ಮ ಅಸಮಾಧಾನವನ್ನ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ಅನುಷ್ಕಾ ಶರ್ಮಾ ಸೂಪರ್ ಕ್ಯಾಪ್ಟನ್ ರೀತಿಯಲ್ಲಿ ವರ್ತಿಸುತ್ತಿರುವುದು ಈಗ ಹಲವು ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಟೀಮ್ ಇಂಡಿಯಾಕ್ಕೆ ಸೂಪರ್ ಕ್ಯಾಪ್ಟನ್ ಆಗಿದ್ದಾಳೆ ಅನುಷ್ಕಾ ಶರ್ಮಾ..!
