ಕನ್ನಡದಲ್ಲಿ ಇನ್ನೂ 5 ನ್ಯೂಸ್​ ಚಾನಲ್​..!

0
220

ಕನ್ನಡದಲ್ಲಿ ಇನ್ನೂ 5 ನ್ಯೂಸ್​ ಚಾನಲ್​..!
ಈಗಾಗ್ಲೆ ಕರ್ನಾಟಕದಲ್ಲಿ ಹದಿನೈದು ಕನ್ನಡ ನ್ಯೂಸ್​ ಚಾನಲ್​ಗಳಿವೆ. ಎಲ್ಲಾ ವಾಹಿನಿಗಳು ಕ್ಷಣ ಕ್ಷಣಕ್ಕೂ ಬ್ರೇಕಿಂಗ್​ ನ್ಯೂಸ್​ ಕೊಡುತ್ತಲೇ ಇವೆ. ಆದ್ರೆ ಈಗ ಇಡೀ ಮಾಧ್ಯಮ ಲೋಕದ ಬ್ರೇಕಿಂಗ್​ ನ್ಯೂಸ್​ ಏನಂದ್ರೆ, ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ಇನ್ನೂ ಐದು ಕನ್ನಡ ನ್ಯೂಸ್​ ಚಾನಲ್​ಗಳು ಆರಂಭವಾಗುತ್ತಿವೆ. ಇದೇನಪ್ಪಾ ಅಂತಾ ಹುಬ್ಬೇರಿಸಬೇಡಿ. ಇದೇ ಅಕ್ಟೋಬರ್​ 19ನೇ ತಾರೀಕು ಕನ್ನಡದ ಖ್ಯಾತ ನಿರೂಪಕ ಚಂದನ್​ ಶರ್ಮಾ ನೇತೃತ್ವದಲ್ಲಿ ಪವರ್​ ನ್ಯೂಸ್​ ಟಿವಿ ಪರದೆಯ ಮೇಲೆ ಅಪ್ಪಳಿಸುತ್ತಿದೆ.
ಬಿಟಿವಿ ತೊರೆದು G6 ನ್ಯೂಸ್​ ಮಾಡಲು ಹೊರಟಿದ್ದ ಚಂದನ್​, ಈಗ ದಿಟ್ಟ ನಿರ್ಧಾರದ ಜೊತೆಗೆ ಪವರ್​ ನ್ಯೂಸ್​ ಮೂಲಕ ಆನ್​ಸ್ಕ್ರೀನ್​ಗೆ ಬರುತ್ತಿದ್ದಾರೆ. ಪ್ರದೀಪ್​, ಪ್ರಶಾಂತ್​ ಸೇರಿದಂತೆ ಅನುಭವಿ ಪತ್ರಕರ್ತರು ಪವರ್​ ನ್ಯೂಸ್​ನ ಪಿಲ್ಲರ್​ಗಳಾಗಿದ್ದಾರೆ.
ಈಗಾಗ್ಲೆ ಡಿಜಿಟಲ್​ ಮಾಧ್ಯಮದಲ್ಲಿ ಸಂಚಲನವನ್ನುಂಟು ಮಾಡಿರುವ ಫಸ್ಟ್​ ನ್ಯೂಸ್​ ಕೂಡ ಕೆಲವೇ ದಿನಗಳಲ್ಲಿ ಆನ್​ಏರ್​ ಆಗಲಿದೆ. ಪ್ರತಿಭಾನ್ವಿತ ವೃತ್ತಿಪರ ಪತ್ರಕರ್ತರನ್ನ ಹೊಂದಿರುವ ಫಸ್ಟ್​ನ್ಯೂಸ್​ ಬಗ್ಗೆ ಮಾಧ್ಯಮ ಲೋಕದಲ್ಲಿ ಇನ್ನಿಲ್ಲದ ನಿರೀಕ್ಷೆ ಇದೆ. ನವಂಬರ್​ ಅಥವಾ ಡಿಸೆಂಬರ್​ನಲ್ಲಿ ಫಸ್ಟ್​ ನ್ಯೂಸ್​ ಲಾಂಚ್​ ಎನ್ನಲಾಗುತ್ತಿದೆ.
ಇವಿಷ್ಟೇ ಅಲ್ಲ, ಟೈಮ್ಸ್​ ನೌ ಕೂಡ ಕನ್ನಡದಲ್ಲಿ ನ್ಯೂಸ್​ ಚಾನಲ್​ ಮಾಡಲು ತುದಿಗಾಲಲ್ಲಿ ನಿಂತಿದ್ದು, ಈಗಾಗ್ಲೆ ಒಂದು ಸುತ್ತಿನ ಸರ್ವೇ ಕಾರ್ಯ ಮುಗಿಸಿದೆ. ವಾಹಿನಿ ಆರಂಭಕ್ಕೆ ಬೇಕಾದ ಸಿದ್ಧತೆಗಳು ಕೂಡ ಮುಗಿದಿವೆ.
ಝೀ ಸಂಸ್ಥೆ ಕೂಡ ಕನ್ನಡ ಸುದ್ದಿ ವಾಹಿನಿ ಆರಂಭಕ್ಕೆ ತರಾತುರಿ ನಡೆಸಿದೆ. ಕಳೆದ ವಿಧಾನಸಭಾ ಚುನಾವಣೆ ಸಮಯಕ್ಕೆಲ್ಲಾ ಝೀ ನ್ಯೂಸ್​ ಕನ್ನಡ ಆನ್​ ಏರ್​ನಲ್ಲಿ ಇರಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ. ಆದ್ರೆ ಈಗ ಝೀ ಸಂಸ್ಥೆ ಕನ್ನಡ ನ್ಯೂಸ್​ ಚಾನಲ್​ ಬಗ್ಗೆ ತಲೆ ಕೆಡಿಸಿಕೊಂಡಿದೆ. ಈಗಾಗ್ಲೆ ಆರ್ಥಿಕ ಸಂಕಷ್ಟದಲ್ಲಿರುವ ಸುದ್ದಿ ವಾಹಿನಿಯನ್ನ ಖರೀದಿ ಮಾಡುವ ಬಗ್ಗೆಯೂ ಝೀ ಸಂಸ್ಥೆ ಒಂದು ಸುತ್ತು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಟೈಮ್ಸ್​ ನೌ ಹಾಗೂ ಝೀ ನ್ಯೂಸ್​ಗಳ ಜೊತೆಗೆ ಆಂಧ್ರಪ್ರದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಾದ ಎಬಿನ್​ ಆಂಧ್ರಜ್ಯೋತಿ ಸಂಸ್ಥೆ ಕೂಡ ಕನ್ನಡದಲ್ಲಿ ಸುದ್ದಿ ವಾಹಿನಿ ಆರಂಭಕ್ಕೆ ಚಿಂತನೆ ನಡೆಸಿದೆ. ಆಂಧ್ರದಲ್ಲಿ ಈಗಾಗ್ಲೆ ABN ನ್ಯೂಸ್​ ಹಾಗೂ ಆಂಧ್ರಜ್ಯೋತಿ ಪತ್ರಿಕೆಗಳು ಮನೆ ಮಾತಾಗಿವೆ. ಹೀಗಾಗಿ ಕರ್ನಾಟಕದಲ್ಲೂ ABN ನ್ಯೂಸ್​ ವಾಹಿನಿ ಆರಂಭಕ್ಕೆ ಸಂಸ್ಥೆಯ ಮುಖ್ಯಸ್ಥರು ನಿರ್ಧರಿಸಿದ್ದಾರೆ. ಒಟ್ಟಾರೆ​ ಕನ್ನಡದ ಸುದ್ದಿವಾಹಿನಿಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಸಂರ್ಭದಲ್ಲಿ ಟೈಮ್ಸ್​ ನೌ, ಝೀ ನ್ಯೂಸ್​ ಹಾಗೂ ABN ರೀತಿಯ ನೆಟ್​ವರ್ಕ್​ ಚಾನಲ್​ಗಳು ಕರ್ನಾಟಕಕ್ಕೆ ಕಾಲಿಡುತ್ತಿರುವುದು ಯುವ ಪತ್ರಕರ್ತರ ಮೊಗದಲ್ಲಿ ನಗು ಮೂಡಿಸುವಂತಾಗಿದೆ.

LEAVE A REPLY

Please enter your comment!
Please enter your name here