ಗಾಝಿ ಜಲಾವುದ್ದೀನ್, ಪಶ್ಚಿಮಬಂಗಾಳದವರು. ಕೊಲ್ಕತ್ತಾದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಬದುಕು ಸವೆಸುತ್ತಿರುವವರು.ಇವರನ್ನೀಗ ಅಕ್ಷರ ಸಂತ ಎಂದೆಲ್ಲಾ ಜನ ಕರೆಯುತ್ತಾರೆ. ಇವರು ಟ್ಯಾಕ್ಸಿ ಓಡಿಸುತ್ತಲೇ ಬಡ ಮಕ್ಕಳಿಗಾಗಿ ಹುಟ್ಟೂರಿನಲ್ಲಿ ಶಾಲೆ ಕಟ್ಟಿಸಿದ್ದಾರೆ.
ಶಾಲೆ ಕಲಿಯುವಾಗ ಗಾಝಿ ಅವರು ತಮ್ಮ ಕ್ಲಾಸಿನಲ್ಲಿ ಬುದ್ಧಿವಂತ ಹುಡುಗ ಆಗಿದ್ದರು. ಹಣ ಇಲ್ಲದೆ ಎರಡನೇ ತರಗತಿಯಲ್ಲಿ ಶಾಲೆ ಬಿಡಬೇಕಾಯಿತು. ಚಿಕ್ಕ ವಯಸ್ಸಿನಲ್ಲಿ ಗಾಝಿಗೆ ಆಟಕ್ಕಿಂತ ಪುಸ್ತಕ ಪ್ರೀತಿ ಹೆಚ್ಚಿತ್ತು. ಆದರೆ, ನಸೀಬು ಬೇರೆಯೇ ಅಗಿತ್ತು. 13ನೆ ವರ್ಷದಲ್ಲೇ ಹೊಟ್ಟೆ ಹೊರೆಯಲು ಗಾಝಿ ಅವರು ರಿಕ್ಷಾ ಚಲಾಯಿಸುವಂತಾಯಿತು.
ಗಾಝಿ ಅವರ ತಂದೆ ಪಶ್ಚಿಮ ಬಂಗಾಳದ ಸುದಂದರವನದ ಠಾಕೂರ್ ಚೌಕ್ನಲ್ಲಿ ರೈತ ಅಗಿದ್ದರು. ಅವರಿಗೆ ತನ್ನ ಕುಟುಂಬದ ಹೊಟ್ಟೆ ಹೊರೆಯುವುದು ಕೂಡ ಕಷ್ಟವಾಗುತ್ತಿತ್ತು. ಗಾಝಿಯ ತಂದೆ ಕೆಲಸ ಹುಡುಕಿ ಗ್ರಾಮದಿಂದ ನಗರಕ್ಕೆ ಬಂದರು. ಆವರಿಗೆ ಯಾವ ಕೆಲಸವೂ ಸಿಗಲಿಲ್ಲ. ಪರಿಸ್ಥಿತಿ ಎಷ್ಟು ಕೆಟ್ಟಿತ್ತೆಂದರೆ ಗಾಝಿ ಸಣ್ಣಪ್ರಾಯದಲ್ಲೇ ಬೀದಿಯಲ್ಲಿ ಭಿಕ್ಷೆ ಬೇಡಬೇಕಾಯಿತು.
13ವರ್ಷದಲ್ಲಿ ಗಾಝಿ ಕೊಲ್ಕತಾ ಇಂಟಾಲಿ ಬಾಝಾರ್ನಲ್ಲಿ ರಿಕ್ಷಾ ಚಲಾಯಿಸುವ ಕೆಲಸ ಮಾಡತೊಡಗಿದರು. ಮೊದಲು ಹಮಾಲಿ ಕೆಲಸ ಮಾಡುತ್ತಿದ್ದರು. ನಂತರ ರಿಕ್ಷಾ ಚಲಾಯಿಸಲು ಆರಂಭಿಸಿದರು. ಹದಿನೆಂಟನೆ ವರ್ಷದಲ್ಲಿ ಟ್ಯಾಕ್ಸಿ ಡ್ರೈವರ್ ಆದರು. ಆಗ ಅವರಲ್ಲಿ ತಮ್ಮ ಗ್ರಾಮದ ಬಡ ಮಕ್ಕಳಿಗಾಗಿ ಶಾಲೆ ತೆರೆಯುವ ಕನಸ್ಸು ಹುಟ್ಟಿಕೊಂಡಿತು.
ಆರ್ಥಿಕ ವಾಗಿ ದುರ್ಬಲ ಅಂದರೆ ಬಡವರ ಮಕ್ಕಳನ್ನು ಗಮನದಲಿಟ್ಟು ಗಾಝಿ ಸುಂದರವನ ಡ್ರೈವಿಂಗ್ ಸಮಿತಿ ಹುಟ್ಟುಹಾಕಿದರು. ಸುಂದರವನದ ಮೂಲಕ ಹತ್ತಾರು ಯುವಕರಿಗೆ ಉಚಿತವಾಗಿ ಡ್ರೈವಿಂಗ್ ಕಲಿಸಿದರು. ಆದರೆ, ಆ ಯುವಕರು ಡ್ರೈವಿಂಗ್ ಕಲಿತು ಸಂಪಾದನೆ ಆರಂಭಿಸಿದಾಗ ಐದು ರೂಪಾಯಿ ಅವರು ಈ ಸಮಿತಿಗೆ ದಾನ ನೀಡಬೇಕಿತ್ತು. ಅಷ್ಟೇ ಅಲ್ಲ, ಗಾಝಿ ಜಲಾವುದ್ದೀನ್ ಡ್ರೈವಿಂಗ್ ಕಲಿಸಿದ ವಿದ್ಯಾರ್ಥಿಗಳಿಗೆ ಗ್ರಾಮದ ಇತರರಿಗೂ ಡ್ರೈವಿಂಗ್ ಕಲಿಸಲು ಹೇಳಿದರು. ಹೀಗೆ ಡೈವಿಂಗ್ ಸ್ಕೂಲ್ ನಡೆಯತೊಡಗಿತು.
ಆಮೇಲೆ, ಗಾಝಿ ಜಲಾವುದ್ದೀನ್, ತನ್ನೂರಿನ ತನ್ನ ಎರಡು ಕೋಣೆಯ ಮನೆಯಲ್ಲಿ, ಒಂದು ಕೋಣೆಯಲ್ಲಿ ಶಾಲೆ ತೆರೆದರು. ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ಆರಂಭಿಸಿದರು. ಮೊದ ಮೊದಲು ಯಾರು ಕೂಡ ಗಾಝಿಯ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರಲಿಲ್ಲ. ಶಾಲೆಗೆ ಕಳುಹಿಸಿ ಏನಾಗಬೇಕಿದೆ ಎಂದು ಅವರೆಲ್ಲ ಹೇಳುತ್ತಿದ್ದರು. ಆದರೂ ಗಾಝಿ ಸೋಲೊಪ್ಪಲಿಲ್ಲ.ಶಾಲೆ ತೆರೆಯುವ ನಿರ್ಧಾರ ಮಾಡಿದರು.
1998ರಲ್ಲಿ ಗಾಝಿ ಇಸ್ಮಾಯಿಲ್ ಇಸ್ರಾಫಿಲ್ ಹೆಸರಿನಲ್ಲಿ ಪ್ರೀಪ್ರೈಮರಿ ಸ್ಕೂಲ್ ತೆರೆದರು. ಆಗ ಇಬ್ಬರು ಶಿಕ್ಷಕರು ಮತ್ತೆ 22 ವಿದ್ಯಾರ್ಥಿಗಳು ಆರಂಭದಲ್ಲಿ ಇದ್ದರು. ನಂತರ ಡ್ರೈವಿಂಗ್ನಲ್ಲಿ ಬಂದ ಹಣ, ಮತ್ತೆ ದಾನಿಗಳ ನೆರವಿನಿಂದ 2012ರಲ್ಲಿ ಶಾಲೆಯ ಇಡೀ ಕಟ್ಟಡ ಖರೀದಿಸಿದರು. ಈಗ ಆ ಕಟ್ಟಡದಲ್ಲಿ 12 ಕೋಣೆಗಳಿವೆ. 21ಶಿಕ್ಷಕರಿದ್ದು, 450 ಮಕ್ಕಳು ಕಲಿಯುತ್ತಿದ್ದಾರೆ. ಮಕ್ಕಳ ಪೋಷಕರು ಕೊಡುತ್ತಿರುವ ಅಲ್ಪಸ್ವಲ್ಪ ಹಣದ ಸಹಾಯ ಶಾಲೆ ಮುನ್ನಡೆಯುತ್ತಿದೆ. ಮತ್ತೆ ಜಲಾವುದ್ದೀನ್ ಅವರನ್ನು ಬಾಲಿವುಡ್ ನ ಅಮಿತ್ ಬಚ್ಚನ್ ಮತ್ತು ಅಮೀರ್ ಖಾನ್ ಕರೋಡ್ ಪತಿ ಕಾರ್ಯಕ್ರಮಕ್ಕೆ ಕರೆಸಿ ಆರ್ಥಿಕ ಸಹಾಯ ಮಾಡಿದ್ದಾರೆ. ಬಡ ಮಕ್ಕಳಿಗೆ ಶಾಲೆ ಕಟ್ಟಿಸಿದ ಈ ಟ್ಯಾಕ್ಸಿ ಚಾಲಕ ಗಾಝಿ ಜಲಾವುದ್ದೀನ, ಪ್ರತಿಯೊಬ್ಬರಿಗೂ ಸ್ಫೂರ್ತಿ.