ಟ್ಯಾಕ್ಸಿ ಡ್ರೈವರ್ ಮಗ ಟ್ರಾವೆಲ್ ಕಂಪನಿ ಮಾಲೀಕ!

Date:

ಆ ಯಶಸ್ವಿ ಉದ್ಯಮಿ ಯಾರು ಎಂದುಕೊಂಡ್ರಾ ಮಹಾರಾಷ್ಟ್ರ ಪ್ರಸನ್ನ ಪಠವರ್ಧನ್. ಒಂದು ಕಾಲದಲ್ಲಿ ಭಾರತ ಹಾಗೂ ಮಹಾರಾಷ್ಟ್ರ ರಾಜ್ಯ ತಂಡವನ್ನು ಮುನ್ನಡೆಸಿದ ಖ್ಯಾತ ಬಾಸ್ಕೆಟ್ಬಾಲ್ ಆಟಗಾರ. ತಂದೆಯ ಕಂಡ ಕನಸಿನ ಹಿಂದೆ ಬಿದ್ದು, ಯಶಸ್ಸು ಕಂಡ ಸಾಧಕರು ಪ್ರಸನ್ನ ಪಠವರ್ಧನ್.

ಯಾರದ್ದೋ ಕೈಯಲ್ಲಿ ದುಡಿಯುವುದಕ್ಕಿಂತ ನಾನೇ ಏನಾದ್ರೂ, ಸಾಧಿಸಿ ತೋರಿಸ್ತೀನಿ ಎಂಬ ಛಲ, ಇಂದು ಪ್ರಸನ್ನ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅಂದಹಾಗೆ ಪ್ರಸನ್ನ ಅವರು, Prasanna Purple Mobility Solutions Pvt. Ltd. ಒಡೆಯ. 1964ರಲ್ಲಿ ತಂದೆ ಆರಂಭಿಸಿದ ಕಂಪನಿಯನ್ನು ಹೆಮ್ಮರವಾಗಿ ಬೆಳಿಸಿದ ಸಾಧಕರು ಕೂಡ.


ಪ್ರಸನ್ನ ಅವರ ಕಂಪನಿಯಲ್ಲಿ ಸದ್ಯ 1200 ಬಸ್ಗಳಿದ್ದು, 85 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಂದಹಾಗೆ ಈ ಕಂಪನಿಗಳಲ್ಲಿ 700 ಬಸ್ಗಳು ಸ್ವತಃ ಪ್ರಸನ್ನಅವರದ್ದೇ ಆಗಿದೆ. ಸದ್ಯ ಪ್ರಸನ್ನ ಮೂರು ಕಂಪನಿಗಳನ್ನು ನಡೆಸುತ್ತಿರುವ ಉದ್ಯಮಿ. 1964ರಲ್ಲಿ ಪ್ರಸನ್ನ ಟ್ರಾವೆಲ್ಸ್ ಎಂದು ಇದ್ದ ಕಂಪನಿ, ಈಗಿನ ಟ್ರೆಂಡ್ಗೆ ಅನುಗುಣವಾಗಿ ಹೆಸರನ್ನು ಬದಲಿಸಿಕೊಂಡಿದೆ. ಅಂದಹಾಗೆ ಈಗ ಪ್ರಸನ್ನ ಪರ್ಪಲ್ ಎಂಬ ಹೆಸರಿನಿಂದ ಎಲ್ಲರ ಮನ ಗೆದ್ದಿದೆ.


ಮಹಾರಾಷ್ಟ್ರದ ಅವಿಭಕ್ತ ಕುಟಂಬದಲ್ಲಿ ಜನಿಸಿದ ಪ್ರಸನ್ನ ಅವರ ಮನೆಯಲ್ಲಿ 24 ಜನ. ಎಲ್ಲರು ತಮ್ಮ ಕುಟುಂಬವನ್ನು ಸಂಕಷ್ಟದಿಂದ ಮೇಲೆತ್ತಲು ಶ್ರಮಿಸೋರೆ. ಪ್ರಸನ್ನರ ತಂದೆಯ ಸಹೋದರ ಡೈರಿ ಇಟ್ಟುಕೊಂಡಿದ್ರು. ಅಲ್ಲದೆ ಉತ್ತಮ ವ್ಯಾಪಾರ ಸಹ ಇತ್ತು. ಒಂದು ದಿನ ಪ್ರಸನ್ನರ ತಂದೆಗೆ ದೊಡ್ಡ ಹೊಡೆತ ಬಿದ್ದಿತು. ಒಂದು ಶಾಲೆಗೆ ಓಡಿಸುತ್ತಿದ್ದ ಬಸ್ಗಳ ಸೇವೆಯನ್ನು ಆ ಸಂಸ್ಥೆ ಸ್ಥಗಿತಗೊಳಿಸಿತು. ಅಲ್ಲದೆ ಇನ್ನು ಬೇಕಿದ್ರೆ ಹೇಳ್ತೀವಿ ಎಂದಿತು. ಇದ್ರಿಂದ ಶಾಕ್ಗೆ ಒಳಗಾದದ್ರು. ಏನಾದ್ರೂ ಸಾಧಿಸಬೇಕು ಅಂತಾ ಆಗಲೇ ತೀರ್ಮಾನ ಮಾಡಿಬಿಟ್ಟರು.
1985ರಲ್ಲಿ ಮ್ಯಾನೇಜ್ಮೆಂಟ್ನಲ್ಲಿ ಡಿಗ್ರಿ ಮಾಡುತ್ತಿದ್ದ ಪ್ರಸನ್ನ ತಂದೆಯ ಕನಸಿನ ಕೂಸಿಗೆ ನೀರು ಹಾಕಲು ಮುಂದಾದ್ರು. ಪರಿಣಾಮ ಇಂದು ಪ್ರಸನ್ನ ಪರ್ಪಲ್ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. Prasanna Purple Mobility Solutions Pvt. Ltd ಸೇರಿದಂತೆ ದೊಡ್ಡ ಮಟ್ಟದ ಮೂರು ಕಂಪನಿಗಳಿವೆ. ಅದಕ್ಕೆಲ್ಲಾ ಒಡೆಯ ಪ್ರಸನ್ನ ಪಠರ್ವಧನ್ ಅವರು. ಇವರ ವಹಿವಾಟು 300 ಕೋಟಿ ರೂಪಾಯಿಗೂ ಅಧಿಕ.
ಒಟ್ಟಿನಲ್ಲಿ ತಂದೆಯ ಕನಸಿನಂತೆ ಮಗ ದೊಡ್ಡ ಮಟ್ಟದ ಕಂಪನಿ ಸ್ಥಾಪಿಸಿ, ನೂರಾರು ಜನರಿಗೆ ಬದುಕು ಕಟ್ಟಿಕೊಡುತ್ತಿರುವ ಟ್ರಾವೆಲ್ಸ್ ಕಂಪನಿಯ ಒಡೆಯ ಪ್ರಸನ್ನ ಪಠವರ್ಧನ್ ಯುವ ಉದ್ಯಮಿಗಳಿಗೆ ಸ್ಫೂರ್ತಿಯ ಶಕ್ತಿಯೇ ಸರಿ.

Share post:

Subscribe

spot_imgspot_img

Popular

More like this
Related

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್ ಸೂಚನೆ

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್...

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ ವಿಜಯಪುರ:- SBI...

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...