ಟ್ವಿಟ್ಟರ್ ನಲ್ಲಿ ರಾಹುಲ್ ವಿಶೇಷ ಮೈಲುಗಲ್ಲಿ..!

Date:

ಟ್ವಿಟ್ಟರ್ ನಲ್ಲಿ ರಾಹುಲ್ ವಿಶೇಷ ಮೈಲುಗಲ್ಲಿ..!

ಕನ್ನಡ ಕೆ.ಎಲ್ ರಾಹುಲ್ ಕ್ರಿಕೆಟ್ ಅಂಗಳದಲ್ಲಿ ಎಷ್ಟು ಖ್ಯಾತರೋ ಅಂಗಳದಾಚೆ ಸಾಮಾಜಿಕ ಜಾಲತಾಣದಲ್ಲೂ ಆ್ಯಕ್ಟೀವ್ ಇರುವ ವ್ಯಕ್ತಿ. ಇನ್ಸ್ಟಾಗ್ರಾಂ ಹಾಗೂ ಟ್ವಿಟ್ಟರ್‌ನಲ್ಲಿ ಕೆಎಲ್ ರಾಹುಲ್ ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ. ಈಗ ರಾಹುಲ್ ಟ್ವಿಟ್ಟರ್‌ನಲ್ಲಿ ಮಾಡಿದ ವಿಶೇಷ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ.

ಕೆಎಲ್ ರಾಹುಲ್ ಟ್ವಿಟ್ಟರ್‌ನಲ್ಲಿ 5 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ 50 ಲಕ್ಷಕ್ಕೂ ಅಧಿಕ ಜನರು ರಾಹುಲ್ ಅವರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ಮೂಲಕ ದೊಡ್ಡ ಮೊತ್ತದ ಅಭಿಮಾನಿ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೆಎಲ್ ರಾಹುಲ್ “ನಿಮ್ಮ ಬೆಂಬಲ ಈ ಪಯಣವನ್ನು ವಿಶೇಷವಾಗಿಸಿದೆ. ಎಲ್ಲಾ ಏರಿಳಿತಗಳಲ್ಲೂ ಜೊತೆಯಾಗಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ಕೃತಜ್ಞನಾಗಿದ್ದೇನೆ. #5 ಮಿಲಿಯನ್ ಫಾಲೋವರ್ಸ್” ಎಂದು ರಾಹುಲ್ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಕೆಎಲ್ ರಾಹುಲ್ ಮತ್ತಷ್ಟು ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ 8.4 ಮಿಲಿಯನ್ ಅಭಿಮಾನಿಗಳು ಕೆಎಲ್ ರಾಹುಲ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಕೆಎಲ್ ರಾಹುಲ್ ಕೂಡ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಚಟುವಟಿಕೆಯಿಂದ ಇದ್ದು ಅಭಿಮಾನಿಗಳೋಂದಿಗೆ ಸಂಪರ್ಕದಲ್ಲಿ ಇರುತ್ತಾರೆ.
ಸದ್ಯ ಕೆಎಲ್ ರಾಹುಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಟೆಸ್ಟ್ ಸರಣಿಗಾಗಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಕಳೆದ ಹಲವು ಸಮಯಗಳ ಬಳಿಕ ಕೆಎಲ್ ರಾಹುಲ್ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸೀಮಿತ ಓವರ್‌ಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ರಾಹುಲ್ ಈ ಫಾರ್ಮ್‌ಅನ್ನು ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲೂ ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದಾರೆ.

ಕೊವಿಡ್ 19 : ICU ಗೆ ದಾಖಲಾದವರಲ್ಲಿ ಪುರುಷರೇ ಹೆಚ್ಚು..!

ವಿಶ್ವದಾದ್ಯಂತ ನಡೆಸಿದ ಮೂರು ಮಿಲಿಯನ್ ಕೋವಿಡ್-19 ರೋಗಿಗಳ ಅಧ್ಯಯನವೊಂದರ ಪ್ರಕಾರ, ತೀವ್ರ ನಿಗಾ ಘಟಕ ಐಸಿಯುನಲ್ಲಿ ದಾಖಲಾಗುತ್ತಿರುವ ಹಾಗೂ ಸಾಯುತ್ತಿರುವವರ ಸಂಖ್ಯೆಯಲ್ಲಿ ಪುರುಷರೇ ಹೆಚ್ಚಾಗಿದ್ದಾರೆ. ರಾಜ್ಯದ ವೈದ್ಯರು ಸಹ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಈ ಮಾದರಿಯನ್ನು ಗಮನಿಸಿದ್ದಾರೆ.
ಓಪನ್ ಅಕ್ಸೆಸ್ ಜರ್ನಲ್ ನ್ಯಾಚುರಲ್ ಕಮ್ಯೂನಿಕೇಷನ್ ನಲ್ಲಿ ಪ್ರಕಟವಾದ ಭಾರತ ಹೊರತುಪಡಿಸಿದಂತೆ 47 ರಾಷ್ಟ್ರಗಳ 3, 111,714 ಸೋಂಕಿತರ ವೈಜ್ಞಾನಿಕ ವಿಶ್ಲೇಷಣೆ ಪ್ರಕಾರ, ಕೋವಿಡ್-19 ರೋಗಕ್ಕೆ ತುತ್ತಾದ ಪುರುಷರು, ಮಹಿಳೆಯರಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿ ತುರ್ತು ತೀವ್ರ ನಿಗಾ ಘಟಕಕ್ಕೆ ದಾಖಲಾಗುವ ಅಗತ್ಯತೆ ಎದುರಾಗಿದ್ದು, ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಪುರುಷರು ಮತ್ತು ಮಹಿಳೆಯರಲ್ಲಿ ಸಮಾನವಾಗಿ ಸಾರ್ಸ್ – ಕೋವ್-2 ಸೋಂಕು ತಗುಲುವ ಅವಕಾಶ ಇರುವುದು ಈ ಅಧ್ಯಯನದಲ್ಲಿ ತಿಳಿದುಬಂದಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಈ ಪ್ರವೃತ್ತಿ ಕಂಡುಬಂದಿದ್ದು, ಕರ್ನಾಟಕದಲ್ಲೂ ಈ ಮಾದರಿಯನ್ನು ಗಮನಿಸಿರುವುದಾಗಿ ಕರ್ನಾಟಕ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ ಸದಸ್ಯ ಡಾ. ಅನೂಪ್ ಅಮರನಾಥ್ ಹೇಳಿದ್ದಾರೆ.

ರಾಜ್ಯದಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರೇ ಹೆಚ್ಚಾಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಡಿಸೆಂಬರ್ 11ರ ಮಾಹಿತಿ ಪ್ರಕಾರ, ಒಟ್ಟಾರೇ 11,928 ಮರಣಗಳ ಪೈಕಿ ಶೇ. 71 ರಷ್ಟು ಅಂದರೆ 8,552 ಮಂದಿ ಪುರುಷರೇ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಪೂರ್ಣವಾಗಿ ಅರ್ಥವಾಗಿಲ್ಲ. ಇದು ವಾಸ್ತವ ಅಂಶವಾಗಿದ್ದು, ಹೆಚ್ಚಿನ ಅಧ್ಯಯನ ಅಗತ್ಯವಾಗಿದೆ ಎಂದು ಡಾ.ಅಮರ್ ನಾಥ್ ತಿಳಿಸಿದರು.
ಐಸಿಯುನಲ್ಲಿರುವ 421 ಜನರ ಪೈಕಿ ಕೇವಲ 110 ಮಹಿಳೆಯರಾಗಿದ್ದಾರೆ. ಸಾವನ್ನಪ್ಪಿದ್ದ 54 ಜನರಲ್ಲಿ ಕೇವಲ 12 ಮಂದಿ ಮಾತ್ರ ಮಹಿಳೆಯರಾಗಿದ್ದಾರೆ ಎಂದು ಪ್ರಕೃತಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸೋಮನಾಥ್ ಚಟರ್ಜಿ ತಮ್ಮ ಅನುಭವವನ್ನು ಹಂಚಿಕೊಂಡರು.
ಡಿಸೆಂಬರ್ 9ರ ಅಧಿಕೃತ ಮಾಹಿತಿ ಪ್ರಕಾರ, 3,25,999 ಪುರುಷರು, 1,40,993 ಮಹಿಳೆಯರು ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆಯ ಈ ಪೈಕಿ 2876 ಪುರುಷರು ಮತ್ತು 1,334 ಮಹಿಳೆಯರು ಸಾವನ್ನಪ್ಪಿದ್ದಾರೆ. ಪುರುಷರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಲು ಧೂಮಪಾನ ಕಾರಣವಾಗಿರಬಹುದು ಎಂದು ಡಾ. ಚಟರ್ಜಿ ಹೇಳಿದರು.

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಕ್ವೆಲಿನ್..!

ಮುಂಬೈ: ಬಾಲಿವುಡ್ ನ ಹಾಟ್ ಆ್ಯಂಡ್ ಬೋಲ್ಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಟ್ ವರ್ಕ್ ಔಟ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಫಿಟ್ನೆಸ್ ಉತ್ಸಾಹದಲ್ಲಿರುವ ಜಾಕ್ವೆಲಿನ್, ಕಪ್ಪು ಉಡುಪಿಯಲ್ಲಿ ಕನ್ನಡಿ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಿರುವ ಚಿತ್ರವನ್ನು ಇನ್ಸಾಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪಡ್ಡೆ ಹೈಕಳ ನಿದ್ದೆ ಗೆಡಿಸಿದೆ. ಭಿನ್ನ, ವಿಭಿನ್ನ ರೀತಿಯಲ್ಲಿ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಜಾಕ್ವೆಲಿನ್ ಮಾಡಿದ್ದ ಯೋಗ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 2, 204,105 ಜನರ ವೀಕ್ಷಣೆ ಪಡೆದುಕೊಂಡಿತ್ತು.

ಮಹಿಳಾ ವರ್ಲ್ಡ್ ಕಪ್ ವೇಳಾಪಟ್ಟಿ ಪ್ರಕಟ

ಮಹಿಳಾ ವರ್ಲ್ಡ್ ಕಪ್ ವೇಳಾಪಟ್ಟಿ ಪ್ರಕಟ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022 ಮಾರ್ಚ್ 4 ರಿಂದ ನ್ಯೂಜಿಲೆಂಡ್‌ನಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ಏಪ್ರಿಲ್ 3 ರಂದು ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಪ್ರಕಟಿಸಿದೆ.
ಮಹಿಳಾ ವಿಶ್ವಕಪ್ ಅನ್ನು ಈ ಮೊದಲು 2021 ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಸಿಸಿ ಈ ಟೂರ್ನಿಯನ್ನು 2022 ರವರೆಗೆ ಮುಂದೂಡಿತ್ತು. ಐಸಿಸಿ ತನ್ನ ಪರಿಷ್ಕೃತ ವೇಳಾಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ 50 ಓವರ್‌ಗಳ ಪಂದ್ಯಾವಳಿಯಲ್ಲಿ ವಿಶ್ವದ ಎಂಟು ತಂಡಗಳು ಭಾಗವಹಿಸಲಿದ್ದು, ನ್ಯೂಜಿಲೆಂಡ್‌ನ ಆರು ನಗರಗಳಲ್ಲಿ ಒಟ್ಟು 31 ಪಂದ್ಯಗಳನ್ನು ನಡೆಸಲಾಗುವುದು.
ಆಕ್ಲೆಂಡ್‌ನ ಈಡನ್ ಪಾರ್ಕ್, ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್, ಟೌರಂಗಾದ ಬೇ ಓವಲ್, ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್, ಕ್ರೈಸ್ಟ್‌ಚರ್ಚ್‌ನ ಹೆಗ್ಲೆ ಓವಲ್ ಮತ್ತು ಡುನೆಡಿನ್ ವಿಶ್ವವಿದ್ಯಾಲಯ ಓವಲ್‌ನಲ್ಲಿ ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಕ್ರೈಸ್ಟ್ಚರ್ಚ್ ಮತ್ತು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ಕ್ರೈಸ್ಟ್ಚರ್ಚ್ ನಲ್ಲಿ ನಡೆಯಲಿದೆ.
ಆತಿಥೇಯರಾದ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ಈಗಾಗಲೇ ಪಂದ್ಯಾವಳಿಗೆ ಅರ್ಹತೆ ಪಡೆದಿದೆ. ಉಳಿದ ಮೂರು ತಂಡಗಳನ್ನು ಐಸಿಸಿ ಅರ್ಹತಾ ಪಂದ್ಯಾವಳಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಹತಾ ಪಂದ್ಯಾವಳಿ ಶ್ರೀಲಂಕಾದಲ್ಲಿ ಜೂನ್ 26 ರಿಂದ 2021 ಜುಲೈ 10 ರವರೆಗೆ ನಡೆಯಲಿದೆ. ವಿಶ್ವಕಪ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮತ್ತು ಅರ್ಹತಾ ಪಂದ್ಯಗಳಲ್ಲಿ ಒಂದಾಗಿದೆ.
ವಿಶ್ವಕಪ್ ವೇಳಾಪಟ್ಟಿ
ಬೇ ಓವಲ್, ಟೌರಂಗಾ
04 ಮಾರ್ಚ್ 2022 – ನ್ಯೂಜಿಲೆಂಡ್ v/s ಕ್ವಾಲಿಫೈಯರ್
06 ಮಾರ್ಚ್ 2022 – ಕ್ವಾಲಿಫೈಯರ್ v/s ಟೀಂ ಇಂಡಿಯಾ
08 ಮಾರ್ಚ್ 2022 – ಆಸ್ಟ್ರೇಲಿಯಾ v/s ಕ್ವಾಲಿಫೈಯರ್
11 ಮಾರ್ಚ್ 2022 – ಕ್ವಾಲಿಫೈಯರ್ v/s ದಕ್ಷಿಣ ಆಫ್ರಿಕಾ
14 ಮಾರ್ಚ್ 2022 – ದಕ್ಷಿಣ ಆಫ್ರಿಕಾ v/s ಇಂಗ್ಲೆಂಡ್
16 ಮಾರ್ಚ್ 2022 – ಇಂಗ್ಲೆಂಡ್ v/s ಟೀಂ ಇಂಡಿಯಾ
18 ಮಾರ್ಚ್ 2022 – ಕ್ವಾಲಿಫೈಯರ್ v/s ಕ್ವಾಲಿಫೈಯರ್
ಯೂನಿವರ್ಸಿಟಿ ಓವಲ್, ಡುನೆಡಿನ್
05 ಮಾರ್ಚ್ 2022 – ಕ್ವಾಲಿಫೈಯರ್ v/s ದಕ್ಷಿಣ ಆಫ್ರಿಕಾ
07 ಮಾರ್ಚ್ 2022 – ನ್ಯೂಜಿಲೆಂಡ್ v/s ಕ್ವಾಲಿಫೈಯರ್
09 ಮಾರ್ಚ್ 2022 – ಕ್ವಾಲಿಫೈಯರ್ v/s ಇಂಗ್ಲೆಂಡ್
ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್
05 ಮಾರ್ಚ್ 2022 – ಆಸ್ಟ್ರೇಲಿಯಾ v/s ಇಂಗ್ಲೆಂಡ್
10 ಮಾರ್ಚ್ 2022 – ನ್ಯೂಜಿಲೆಂಡ್ v/s ಟೀಂ ಇಂಡಿಯಾ
12 ಮಾರ್ಚ್ 2022 – ಕ್ವಾಲಿಫೈಯರ್ v/s ಟೀಂ ಇಂಡಿಯಾ
14 ಮಾರ್ಚ್ 2022 – ಕ್ವಾಲಿಫೈಯರ್ v/s ಕ್ವಾಲಿಫೈಯರ್
17 ಮಾರ್ಚ್ 2022 – ನ್ಯೂಜಿಲೆಂಡ್ v/s ದಕ್ಷಿಣ ಆಫ್ರಿಕಾ
21 ಮಾರ್ಚ್ 2022 – ಕ್ವಾಲಿಫೈಯರ್ v/s ಕ್ವಾಲಿಫೈಯರ್
22 ಮಾರ್ಚ್ 2022 – ಟೀಂ ಇಂಡಿಯಾ v/s ಕ್ವಾಲಿಫೈಯರ್
ಬೇಸಿನ್ ರಿಸರ್ವ್, ವೆಲ್ಲಿಂಗ್ಟನ್
13 ಮಾರ್ಚ್ 2022 – ನ್ಯೂಜಿಲೆಂಡ್ v/s ಆಸ್ಟ್ರೇಲಿಯಾ
15 ಮಾರ್ಚ್ 2022 – ಆಸ್ಟ್ರೇಲಿಯಾ v/s ಕ್ವಾಲಿಫೈಯರ್
22 ಮಾರ್ಚ್ 2022 – ದಕ್ಷಿಣ ಆಫ್ರಿಕಾ v/s ಆಸ್ಟ್ರೇಲಿಯಾ
24 ಮಾರ್ಚ್ 2022 – ದಕ್ಷಿಣ ಆಫ್ರಿಕಾ v/s ಕ್ವಾಲಿಫೈಯರ್
25 ಮಾರ್ಚ್ 2022 – ಕ್ವಾಲಿಫೈಯರ್ v/s ಆಸ್ಟ್ರೇಲಿಯಾ
27 ಮಾರ್ಚ್ 2022 – ಇಂಗ್ಲೆಂಡ್ v/s ಕ್ವಾಲಿಫೈಯರ್
30 ಮಾರ್ಚ್ 2022 – ಸೆಮಿ-ಫೈನಲ್ 1
ಈಡನ್ ಪಾರ್ಕ್, ಆಕ್ಲೆಂಡ್
19 ಮಾರ್ಚ್ 2022 – ಟೀಂ ಇಂಡಿಯಾ v/s ಆಸ್ಟ್ರೇಲಿಯಾ
20 ಮಾರ್ಚ್ 2022 – ನ್ಯೂಜಿಲೆಂಡ್ v/s ಇಂಗ್ಲೆಂಡ್
ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್
24 ಮಾರ್ಚ್ 2022 – ಇಂಗ್ಲೆಂಡ್ v/s ಕ್ವಾಲಿಫೈಯರ್
26 ಮಾರ್ಚ್ 2022 – ನ್ಯೂಜಿಲೆಂಡ್ v/s ಕ್ವಾಲಿಫೈಯರ್
27 ಮಾರ್ಚ್ 2022 – ಟೀಂ ಇಂಡಿಯಾ v/s ದಕ್ಷಿಣ ಆಫ್ರಿಕಾ
31 ಮಾರ್ಚ್ 2022 – 2ನೇ ಸೆಮಿ-ಫೈನಲ್ ಪಂದ್ಯ
03 ಎಪ್ರಿಲ್ 2022 – ಫೈನಲ್ ಪಂದ್ಯ

 

 

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...