ಯುವಕರಿಂದ ಹಿಡಿದು ವೃದ್ಧರವರೆಗೂ ಅತೀ ಹೆಚ್ಚಾಗಿ ಕಾಡುತ್ತಿರುವ ಕಾಯಿಲೆ ಅಂದ್ರೆ ಅದು ಡಯಾಬಿಟಿಸ್ . ಈ ಕಾಯಿಲೆಗೆ ಸಂಪೂರ್ಣ ಔಷಧಿಯನ್ನು ಕಂಡುಹಿಡಿಯಲೂ ಇನ್ನೂ ಸಾಧ್ಯವಾಗಿಲ್ಲ. ಡಯಾಬಿಟಿಸ್ಗೆ ಮೂಲ ಕಾರಣ ಇತ್ತೀಚಿನ ಫುಡ್ ಹ್ಯಾಬಿಟ್ಗಳು ಹಾಗೂ ಒತ್ತಡದ ಜೀವನಶೈಲಿ.ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡ ಮೇಲೆ ಅದನ್ನು ನಿತಂತ್ರಣದಲ್ಲಿಡಲು ಹರಸಾಹಸ ಪಡಬೇಕು. ಏನು ತಿನ್ನುವುದಕ್ಕೂ ಹಿಂದೇಟು ಹಾಕುತ್ತಾರೆ. ಡಯಾಬಿಟಿಸ್ ಇದ್ದವರು ಹಣ್ಣುಗಳನ್ನು ತಿನ್ನುವಾಗ ಆದಷ್ಟು ಜಾಗೃತರಾಗಿರಬೇಕು. ಯಾವ ಹಣ್ಣನ್ನು ತಿನ್ನಬೇಕು ಹಾಗೂ ಯಾವ ಹಣ್ಣನ್ನು ತಿನ್ನಬಾರದು ಎಂಬುದನ್ನು ಮಧುಮೇಹಿಗಳು ತಿಳಿದು ಕೊಂಡಿರುವುದು ಅತೀ ಮುಖ್ಯ.ಸಕ್ಕರೆ ಕಾಯಿಲೆ ಇರುವವರು ಹಣ್ಣುಗಳನ್ನು ತಿನ್ನಬಾರದು ಅಂತೇನಿಲ್ಲ. ಆದರೆ, ಕೆಲವು ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವುದರಿಂದ ಇಂತಹ ಹಣ್ಣುಗಳನ್ನು ಆದಷ್ಟು ಅವಾಯ್ಡ್ ಮಾಡಿ.ದ್ರಾಕ್ಷಿ : ಒಂದು ಚಿಕ್ಕ ದ್ರಾಕ್ಷಿಯಲ್ಲಿ ಒಂದು ಗ್ರಾಮ್ನಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ. ಇನ್ನು 15 ದ್ರಾಕ್ಷಿಗಳನ್ನು ತಿಂದರೆ ಅತೀ ಹೆಚ್ಚಿನ ಕಾರ್ಬೋಹೈಡ್ರೇಟ್ ದೇಹಕ್ಕೆ ಸೇರಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆದಷ್ಟು ಅದನ್ನು ಅವಾಯ್ಡ್ ಮಾಡುವುದು ಒಳ್ಳೆಯದು.
ಚೆರಿ : ಚೆರಿ ಹಣ್ಣನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಈ ಹಣ್ಣಿನಲ್ಲಿಯೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗಿರುತ್ತದೆ ಹಾಗೂ ಈ ಹಣ್ಣನ್ನು ತಿಂದರೆ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ. ಆದ ಕಾರಣ ಈ ಹಣ್ಣನ್ನು ತಿನ್ನದಿರಲು ವೈದ್ಯರು ಸಜೆಸ್ಟ್ ಮಾಡುತ್ತಾರೆ.ಪೈನಾಪಲ್ : ಪೈನಾಪಲ್ ಜ್ಯೂಸ್ ಅಂದ್ರೆ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಡಯಾಬಿಟೀಸ್ ಇರುವವರು ಯಾವುದೇ ಪೈನಾಪಲ್ ಜ್ಯೂಸ್ ಕುಡಿಯಬೇಡಿ. ಯಾಕೆಂದರೆ ಈ ಹಣ್ಣಿನಲ್ಲಿ ಕಾರ್ಬೋಹೈಡ್ರೇಡ್ ಅಂಶದ ಜೊತೆಗೆ ಗ್ಲೈಸೆಮಿಕ್ ಅಂಶ ಅತೀ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಡಯಾಬಿಟಿಸ್ ರೋಗಿಗಳಿಗೆ ಹಿತವಲ್ಲ.ಮಾವಿನ ಹಣ್ಣು : ಎಷ್ಟು ತಿಂದರೂ ಮತ್ತೆ ಮತ್ತೆ ಬೇಕೆನಿಸುವ ಹಣ್ಣು ಅಂದ್ರೆ ಅದು ಮಾವಿನ ಹಣ್ಣು. ಆದರೆ ಮಾವಿನ ಹಣ್ಣಿನ ಸೇವನೆ ಡಯಾಬಿಟಿಸ್ ಇರುವವರು ಗ್ಲೈಸೆಮಿಕ್ ಹೆಚ್ಚಿಸುತ್ತದೆ. ಡಯಾಬಿಟಿಸ್ ಇರುವವರು ಮಾವಿನ ಹಣ್ಣನ್ನು ಅವಾಯ್ಡ್ ಮಾಡುವುದು ಉತ್ತಮ.ಬಾಳೆಹಣ್ಣು : ಇದು ಕಾಲದಲ್ಲಿಯೂ ಲಭ್ಯವಾಗುವ ರುಚಿಯಾದಂತಹ ಹಣ್ಣು. ಬಾಳೆ ಹಣ್ಣು ರುಚಿ ಎನಿಸಲು ಅದರಲ್ಲಿರುವ ಕಾರ್ಬೋಹೈಡ್ರೇಟ್ ಅಂಶ ಕಾರಣ. ಇದು ಡಯಾಬಿಟಿಸ್ ರೋಗಿಗಳಿಗೆ ಒಳ್ಳೆಯದಲ್ಲ. ಹಾಗಂತ ಬಾಳೆಹಣ್ಣನ್ನು ಡಯಾಬಿಟಿಸ್ ಇರುವವರು ತಿನ್ನಲೇಬಾರದು ಅಂತೇನಿಲ್ಲ. ಆದರೆ ಹೆಚ್ಚು ಬಾಳೆಹಣ್ಣು ಸೇವಿಸುವುದು ಒಳ್ಳೆಯದಲ್ಲ.ಡ್ರೈ ಫ್ರೂಟ್ಸ್ : ಡಯಾಬಿಟಿಸ್ ಇರುವವರು ಆದಷ್ಟು ಡ್ರೈಫ್ರೂಟ್ಸ್ ಅನ್ನು ಅವಾಯ್ಡ್ ಮಾಡಿ. ಬಾದಾಮ್, ಪಿಸ್ತ ಹಾಗೂ ಇನ್ನಿತರ ಡ್ರೈ ಫ್ರೂಟ್ಸ್ನಲ್ಲಿ ಅತಿಯಾದ ಕಾರ್ಬೋಹೈಡ್ರೇಟ್ ಅಂಶ ಇದೆ. ಹಾಗಾಗಿ ಡ್ರೈಫ್ರೂಟ್ಸ್ ಸೇವನೆ ಒಳ್ಳೆಯದಲ್ಲ.ಡಯಾಬಿಟಿಸ್ ಇರುವವರು ಯಾವ ಹಣ್ಣುಗಳನ್ನು ತಿನ್ನಲೇಬಾರದು ಅಂತೇನಿಲ್ಲ. ಆದರೆ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವ ಹಣ್ಣುಗಳ ಸೇವನೆ ಆದಷ್ಟು ಕಮ್ಮಿ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಡಯಾಬಿಟೀಸ್ ಅನ್ನು ನಿಯಂತ್ರಣದಲ್ಲಿಡಬಹುದು.