ಡಿಕೆಶಿ ಅವರೇ, ನಟ್ಟು-ಬೋಲ್ಟ್ ನಿಮ್ಮ ಬ್ರದರ್ಸ್ ಮಾತಾಡುವ ಭಾಷೆ: ಪ್ರತಾಪ್ ಸಿಂಹ ಕಿಡಿ
ಮೈಸೂರು: ಡಿಕೆಶಿ ಅವರೇ, ನಟ್ಟು-ಬೋಲ್ಟ್ ನಿಮ್ಮ ಬ್ರದರ್ಸ್ ಮಾತಾಡುವ ಭಾಷೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಅದು ಕಾಂಗ್ರೆಸ್ ಜಾತ್ರೆ, ರಾಜಕೀಯಕ್ಕೆ ನೀವು ನಡೆಸಿದ ಯಾತ್ರೆ.
ಕಾಂಗ್ರೆಸ್ ಜಾತ್ರೆಗೆ ಬರಲು, ಕಾಂಗ್ರೆಸ್ ನಾಯಕರ ಫೋಟೋ ಇರುವ ಯಾತ್ರೆಯಲ್ಲಿ ಭಾಗವಹಿಸಲು, ಸುದೀಪ್, ಶಿವಣ್ಣ, ಯಶ್ ಏನೂ ನಿಮ್ಮ ಪಾರ್ಟಿ ಕಾರ್ಡ್ ಓಲ್ಡರ್ಗಳಾ? ಈಗ ನೀವು ಮೇಕೆದಾಟು ಯಾತ್ರೆ ಮಾಡಿ ನಾನೂ ಹೋರಾಟಕ್ಕೆ ಬರ್ತೀನಿ. ನಮ್ಮ ಕಾರ್ಯಕರ್ತರು ಬರ್ತೀವಿ. ಕಾಂಗ್ರೆಸ್ ಬಾವುಟ ಇಲ್ಲದೆ ಯಾತ್ರೆ ಮಾಡಿ ನಾವೆಲ್ಲರೂ ಬರ್ತೀವಿ.
ಡಿಕೆಶಿ ಅವರೇ, ನಟ್ಟು-ಬೋಲ್ಟ್ ನಿಮ್ಮ ಬ್ರದರ್ಸ್ ಮಾತಾಡುವ ಭಾಷೆ. ಅದೇ ಭಾಷೆ ನೀವು ಪ್ರಯೋಗ ಮಾಡಿದ್ದೀರಿ. ಡಿಕೆಶಿ ಅವರೇ, ಹುಲಿ ಏರಿದ್ದೀರಿ. ಜನ ಮರ್ಯಾದೆ ಕೊಡುತ್ತಿರುವುದು ಹುಲಿಗೆ ಹೊರತು ನಿಮಗಲ್ಲ. ದರ್ಪ ಬಿಡಿ. ಹುಲಿ ಇಳಿದ ಮೇಲೆ ಅದೇ ಹುಲಿಯೆ ನಿಮ್ಮನ್ನು ತಿಂದು ಬಿಡುತ್ತದೆ ಎಚ್ಚರ ಇರಲಿ ಎಂದು ಕಿಡಿಕಾರಿದ್ದಾರೆ.