ಡಿಕೆಶಿ ಮನೆಯಲ್ಲಿ ಇದೇ ಫೋನ್ ಟ್ಯಾಪಿಂಗ್ ಮಷಿನ್ !?

admin
By admin
0 Min Read

ಫೋನ್ ಟ್ಯಾಪಿಂಗ್ ವಿಷಯ ಇದೀಗ ರಾಜ್ಯ ರಾಜಕಾರಣ ದಾಟಿ ರಾಷ್ಟ್ರೀಯ ಸುದ್ದಿಯಾಗಿದೆ. ಈ ನಡುವೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲೇ ಫೋನ್ ಟ್ಯಾಪಿಂಗ್ ಯಂತ್ರ ಇದೆ ಎಂಬ ಗಂಭೀರ ಆರೋಪವನ್ನು ಮಾಜಿ ಸಚಿವರಾಗಿರೋ ಸಿ.ಪಿ.ಯೋಗೇಶ್ವರ್ ಮಾಡಿದ್ದಾರೆ.


ಕೋಟ್ಯಂತರ ರೂಪಾಯಿ ಖರ್ಚು ಮಾಡಿರೋ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಫೋನ್ ಟ್ಯಾಪಿಂಗ್ ಮಷಿನ್ ತಂದಿಟ್ಟುಕೊಂಡು ಅದರಿಂದ ನನ್ನ ಫೋನ್ ಕದ್ದು ಆಲಿಸುತ್ತಿದ್ದರು ಎಂದು ದೂರಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೂ ಫೋನ್ ಕದ್ದಾಲಿಕೆ ಮಾಡಿದ್ದರು. ಈ ಕುರಿತು ಕೇಸ್ ನೀಡಿದ್ರೂ ಯಾವುದೇ ರೀತಿ ತನಿಖೆ ಆಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

Share This Article