ಬೆಳಗಾವಿ: ತಪ್ಪು ಮಾಡಿದ್ದರೆ ಖಂಡಿತಾ ಮುಜುಗರ ಆಗುತ್ತದೆ. ಮಂತ್ರಿಗಳು, ಶಾಸಕರು ಭಾಗಿಯಾಗಿದ್ದರೆ ಸರ್ಕಾರಕ್ಕೆ ಅದರಿಂದ ಕಳಂಕ ಎಂದುಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾಗೇಂದ್ರ ವಿಚಾರದಲ್ಲಿ ಸರ್ಕಾರಕ್ಕೆ ಮುಜುಗರವಾಗಿದೆಯೇ ಎಂದ ಪ್ರಶ್ನೆಗೆ, ತಪ್ಪು ಮಾಡಿದ್ದರೆ ಖಂಡಿತಾ ಮುಜುಗರ ಆಗುತ್ತದೆ. ಮಂತ್ರಿಗಳು, ಶಾಸಕರು ಭಾಗಿಯಾಗಿದ್ದರೆ ಸರ್ಕಾರಕ್ಕೆ ಅದರಿಂದ ಕಳಂಕ ಎಂದು ಹೇಳಿದರು.
ಬಿಜೆಪಿ ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಸಿಎಂಗೆ ಇದರಿಂದ ಏನೂ ಸಮಸ್ಯೆ ಇಲ್ಲ. ಕೆಳಗಿನವರು ಸಮಸ್ಯೆ ಮಾಡಿದರೆ ಅದು ಮುಖ್ಯಮಂತ್ರಿಗಳಿಗೆ ಸಂಬಂಧ ಇಲ್ಲ. ನಮ್ಮ ಇಲಾಖೆ ನಾವು ನೋಡಿಕೊಳ್ಳಬೇಕಾಗುತ್ತದೆ. ಅದಕ್ಕೆ ನಾವೇ ಜವಾಬ್ದಾರರು. ಹಾಗಾಗಿ, ಸಿಎಂಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡರು.
ತಪ್ಪು ಮಾಡಿದ್ದರೆ ಖಂಡಿತಾ ಸರ್ಕಾರಕ್ಕೆ ಮುಜುಗರ ಆಗುತ್ತದೆ !
Date: