ತಮಿಳು ಹಾಸ್ಯ ನಟ ಮಧನ್ ಬಾಬ್ ನಿಧನ

Date:

ತಮಿಳು ಹಾಸ್ಯ ನಟ ಮಧನ್ ಬಾಬ್ ನಿಧನ

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮಧನ್ ಬಾಬ್ (71) ಶನಿವಾರ ರಾತ್ರಿ ನಿಧನರಾಗಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟ ಶನಿವಾರ ಸಂಜೆ ಅಡ್ಯಾರ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1984ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟ ಮಧನ್ ಬಾಬ್, ಕಮಲ್ ಹಾಸನ್, ರಜನಿಕಾಂತ್, ಅಜಿತ್ ಕುಮಾರ್, ಸೂರ್ಯ ಮತ್ತು ವಿಜಯ್ ಅವರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹಾಸ್ಯ, ಖಳನಾಯಕ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನರನ್ನ ರಂಜಿಸಿದ್ದರು.
ಚಲನಚಿತ್ರೋದ್ಯಮದಲ್ಲಿ ಅವರ ಸುದೀರ್ಘ ವೃತ್ತಿಜೀವನದಲ್ಲಿ, ಅವರು 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳು ಮಾತ್ರವಲ್ಲದೆ ಮಲಯಾಳಂ, ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ತೆನಾಲಿ ಚಿತ್ರದಲ್ಲಿ ಡೈಮಂಡ್ ಬಾಬು, ಫ್ರೆಂಡ್ಸ್ ಚಿತ್ರದಲ್ಲಿ ಮ್ಯಾನೇಜರ್ ಸುಂದರೇಶನ್ ಪಾತ್ರಗಳು ಪ್ರೇಕ್ಷಕರನ್ನ ನಕ್ಕು ನಲಿಸಿದ್ದರು. ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಲ್ಲದ ಮಧನ್ ಬಾಬು ಅವರು 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....