ಮೈಸೂರು: ಮೈಸೂರು ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಹೌದು ತಂಗಿ ಅನ್ಯಧರ್ಮೀಯ ಯುವಕನನ್ನು ಲವ್ ಮಾಡುತ್ತಿದ್ದಳೆಂಬ ಒಂದೇ ಕಾರಣಕ್ಕೆ ಅಣ್ಣನೊಬ್ಬ ಆಕೆಯೊಂದಿಗೆ ತನ್ನ ತಾಯಿಯನ್ನೂ ಕೆರೆಗೆ ತಳ್ಳಿ ಕೊಂದ ದಾರುಣ ಘಟನೆ ಜಿಲ್ಲೆ ಹುಣಸೂರು ತಾಲ್ಲೂಕಿನ ಮರೂರು ಗ್ರಾಮದಲ್ಲಿ ಜರುಗಿದೆ. ಕೆರೆಯಲ್ಲಿ ಮುಳುಗಿ ಸತ್ತವರನ್ನು 19-ವರ್ಷ-ವಯಸ್ಸಿನ ಯುವತಿ ಧನುಶ್ರೀ ಮತ್ತು 43-ವರ್ಷ ವಯಸ್ಸಿನ ಅನಿತಾ ಎಂದು ಗುರುತಿಸಲಾಗಿದೆ. ಅವರನ್ನು ಕೆರೆಗೆ ತಳ್ಳಿದ ಆರೋಪ ಹೊತ್ತಿರುವ ಯುವಕನ ಹೆಸರು ನಿತಿನ್.
ಅಗ್ನಿ ಶಾಮಕದಳ ಸಿಬ್ಬಂದಿ ಅನಿತಾ ಮತ್ತು ಧನುಶ್ರೀ ದೇಹಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಧನುಶ್ರೀ ಮತ್ತು ಅನಿತಾರನ್ನು ನೆಂಟರ ಮನೆಗೆ ಕರೆದೊಯ್ಯುವುದಾಗಿ ಹೇಳಿ ಕೆರೆದಡಕ್ಕೆ ಕರೆದುಕೊಂಡ ಬಂದ ನಿತಿನ್ ಇಬ್ಬರನ್ನೂ ಕೆರೆಗೆ ನೂಕಿದ ಎಂದು ಹೇಳಲಾಗಿದೆ. ಖುದ್ದು ನಿತಿನ್ ತನ್ನ ತಂದೆಗೆ ತಾಯಿ ಮತ್ತು ತಂಗಿಯನ್ನು ಕೆರೆಗೆ ನೂಕಿ ಕೊಂದಿದ್ದನ್ನು ಹೇಳಿ ಮನೆಯಲ್ಲಿ ಆರಾಮಾಗಿ ನಿದ್ರಿಸಿದನಂತೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ, ತಂಗಿಯನ್ನೇ ಕೆರೆಗೆ ತಳ್ಳಿ ಕೊಲೆ ಮಾಡಿದ ಯುವಕ
Date:






