ತಿನ್ನುವ ಮುನ್ನ ಯೋಚಿಸಿ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?
ನಾವು ತಿನ್ನುವ ತಿಂಡಿ ತಿನಿಸುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಪ್ರತಿದಿನವೂ ಕಾಡುತ್ತದೆ. ಅದರಲ್ಲೂ ದಿನೋಪಯೋಗಿ ತಿಂಡಿಗಳ ವಿಷಯದಲ್ಲಂತೂ ಈ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಆದರೆ ಈ ಕೆಳಗಿನ ಕೆಲ ತಿಂಡಿಗಳಲ್ಲಿರುವ ಅಂಶಗಳು ಯಾವುವು ಎಂಬುದನ್ನು ಓದಿದ ಮೇಲೆ, ಅಂತ ತಿಂಡಿಗಳನ್ನು ಬಹುಶಃ ನಿಮ್ಮ ಜೀವನದಲ್ಲೇ ತಿನ್ನುವುದು ಡೌಟು. ಆ ತಿಂಡಿಗಳು ಇಲ್ಲಿವೆ ನೋಡಿ.
ಬ್ರೇಡ್ ನಲ್ಲಿರುತ್ತೆ ಮನುಷ್ಯನ ಕೂದಲು..!
ಯೆಸ್.. ನಾವು ತಿನ್ನುವ ಬ್ರೆಡ್ ನಲ್ಲಿ ಮನುಷ್ಯನ ಕೂದಲಿನ ಅಂಶ ಇರುತ್ತದೆ. ಎಲ್-ಸಿಸ್ಟೇನ್ ಎಂಬ ಅಂಶವನ್ನು ಬ್ರೆಡ್ ತಯಾರಿಕೆಯ ವೇಳೆ ಬಳಕೆ ಮಾಡಲಾಗುತ್ತದೆ. ಇಷ್ಟಕ್ಕೂ ಎಲ್-ಸಿಸ್ಟೇನ್ ಸಿಗುವುದು ಮನುಷ್ಯನ ಕೂದಲಿನಿಂದ. ವಿಶೇಷವೆಂದರೆ ಬ್ರೆಡ್ ತಯಾರಿಸಲು ಬೇರೆ ಬೇರೆ ವಿಧಾನಗಳಿವೆ. ಆದರೆ ಎಲ್-ಸಿಸ್ಟೇನ್ ನಿಂದ ಬ್ರೆಡ್ ತಯಾರಿಸುವ ವಿಧಾನ ತುಂಬಾ ಅಗ್ಗ. ಆದ್ದರಿಂದ ಅದನ್ನೇ ಬಳಕೆ ಮಾಡಲಾಗುತ್ತದೆ. ಆಗ ಬ್ರೆಡ್ ಸೇವಿಸಿದಾಗ ಅರಿಯದೇ ಮನುಷ್ಯನ ಕೂದಲು ಹೊಟ್ಟೆ ಸೇರುತ್ತದೆ.
ಐಸ್ ಕ್ರೀಮ್ ನಲ್ಲಿ ಬೀವರ್ ಕೊಬ್ಬು ಇರುತ್ತೆ..!
ಸಾಮಾನ್ಯ ಬೀವರ್ ಗಳು ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕುತ್ತವೆ. ಆದರೆ ಐಸ್ ಕ್ರೀಮ್ ಗೆ ಪರಿಮಳ ಬರುವುದಕ್ಕಾಗಿ ಬೀವರ್ ನ ಕೊಬ್ಬನ್ನು ಸೇರಿಸಲಾಗುತ್ತದೆ. ಇದರಿಂದ ಅಪಾರ ಪ್ರಮಾಣದಲ್ಲಿ ಬೀವರ್ ಗಳ ಹತ್ಯೆಯಾಗುತ್ತಿದೆ. ವಿಶೇಷವೆಂದರೆ ಶತ್ರುಗಳನ್ನು ಓಡಿಸಲು ಬೀವರ್ ಗಳು ಇದನ್ನು ಬಳಕೆ ಮಾಡುತ್ತವೆ. ಆದರೆ ಅದೇ ಈಗ ಬೀವರ್ ಗಳ ಜೀವಕ್ಕೆ ಎರವಾಗಿದೆ.
ಕ್ಯಾಂಡಿಯಲಿರುತ್ತದೆ ಕೀಟ..!
ನಾವು ತಿನ್ನುವ ಕ್ಯಾಂಡಿಯಲ್ಲಿ ಕೀಟದ ಅಂಶ ಬಳಕೆಯಾಗಿರುತ್ತದೆ..! ಕ್ಯಾಂಡಿಗೆ ಬಣ್ಣ ಬರಲು ಇದನ್ನು ಬಳಕೆ ಮಾಡಲಾಗುತ್ತದೆ..! ವಿಚಿತ್ರವೆಂದರೆ ಕ್ಯಾಂಡಿ ತಯಾರಿಕೆ ಬೇಕಾಗುವ ಕೆಲ ಕೀಟಗಳನ್ನು ಭಾರತ ಮತ್ತು ಥಾಯ್ಲೆಂಡ್ ನಿಂದ ತರಲಾಗುತ್ತದೆ. ಅವುಗಳು ಸ್ರವಿಸುವ ದ್ರವವನ್ನು ಕ್ಯಾಂಡಿಗೆ ಬಳಕೆ ಮಾಡುವ ಮೂಲಕ ಅದಕ್ಕೆ ಬಣ್ಣ ಮತ್ತು ವಿವಿಧ ಆಕಾರ ನೀಡಲಾಗುತ್ತಂತೆ..!
ಕೆಂಪು ಪಾನಿಯದಲ್ಲೂ ಕೀಟದ ಹಾವಳಿ
ನಾವು ಸೇವಿಸುವ ಹೆಚ್ಚಿನ ಕೆಂಪು ವರ್ಣದ ಪಾನಿಯಗಳಲ್ಲಿ ಕೀಟದ ಅಂಶ ಇರುತ್ತದೆ. ವಿಶೇಷವೆಂದರೆ ಈ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲು ಅಮೋನಿಯಾ ಅಥವಾ ಸೋಡಿಯಂ ಬೇಕಾಗುತ್ತದೆ. ಅದನ್ನು ಕೀಟಗಳ ರೆಕ್ಕೆಯಿಂದ ಪಡೆಯಲಾಗುತ್ತದೆ. ಆದ್ದರಿಂದ ಕೆಂಪು ವರ್ಣದ ಆಹಾರ ಪದಾರ್ಥ ಸೇವಿಸುವಾಗ ಎಚ್ಚರಿಕೆ ವಹಿಸುವುದು ಅನಿವಾರ್ಯ.
ಬಿಯರ್ ನಲ್ಲಿರುತ್ತದೆ ಮೀನಿನ ಅಂಶ
ಇದು ಕುಡುಕರ ವಿಷಯ.. ಅದೇನಪ್ಪಾ ಅಂದರೆ ಬಿಯರ್ ತಯಾರಿಕೆಯ ವೇಳೆ ಮೀನನ್ನು ಬಳಕೆ ಮಾಡಲಾಗುತ್ತದೆ..! ಮೀನಿನಿಂದ ದೊರೆಯುವ ಅಂಟಂಟು ದ್ರವವನ್ನು ಬೀಯರ್ ತಯಾರಿಕೆಯ ವೇಳೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದನ್ನು ಬಳಕೆ ಮಾಡುವ ಉದ್ದೇಶವೇನೆಂದರೆ ಫಿಲ್ಟರ್ ಆಗಿರದ ಬಿಯರ್ ನ್ನು ಫಿಲ್ಟರ್ ಮಾಡಲು ಇದನ್ನು ಬಳಸುತ್ತಾರೆ. ಅದರಲ್ಲೂ ಯೀಸ್ಟ್ ನಂತಹ ವಸ್ತುವನ್ನು ಬಿಯರ್ ನಿಂದ ತೆಗೆದುಹಾಕಲು ಮೀನಿನ ಅಂಟು ದ್ರವ ಬೇಕೆ ಬೇಕು.
ಹಳದಿ, ಕಿತ್ತಳೆ ಪಾನಿಯಗಳಲ್ಲಿ ಟಾರ್ ಇರುತ್ತದೆ.
ಯೆಸ್.. ನಾವು ಮಾವಿನ ಹಣ್ಣು ಮತ್ತು ಕಿತ್ತಳೆ ಹಣ್ಣಿದ ಜ್ಯೂಸ್ ಎಂದು ಸೇವಿಸುವ ಕೆಲವು ಪಾನೀಯಗಳಲ್ಲಿ ಡಾಂಬಾರ್ ನ ಅಂಶ ಇರುತ್ತವೆ. ಈ ರೀತಿಯ ಪಾನಿಯಗಳಿಗೆ ಹಳದಿ ಮತ್ತು ಕಿತ್ತಳೆ ಬಣ್ಣವನ್ನು ತರಲು ಡಾಂಬಾರನ್ನು ಬಳಕೆ ಮಾಡಲಾಗುತ್ತದೆ. ಇಂತಹ ಜ್ಯೂಸ್ ಸೇವಿಸುವುದರಿಂದ ಮಕ್ಕಳಲ್ಲಿ ಹೈಪರ್ ಆ್ಯಕ್ಟಿವಿಟಿಯಂತಹ ಸಮಸ್ಯೆಗಳು ತಲೆದೋರಬಹುದು.
ಎನರ್ಜಿ ಡ್ರಿಂಕ್ ಗಳಲ್ಲಿರುತ್ತದೆ ಗೂಳಿಯ ಕೊಬ್ಬು
ರೆಡ್ ಬುಲ್ ಎನರ್ಜಿ ಡ್ರಿಂಕ್ ಎಲ್ಲರಿಗೂ ಗೊತ್ತು. ಆದರೆ ವಿಶ್ವ ಪ್ರಸಿದ್ದ ಈ ಎನರ್ಜಿ ಡ್ರಿಂಕ್ ನಲ್ಲಿ ಗೂಳಿಯ ಕೊಬ್ಬನ್ನು ಬಳಕೆ ಮಾಡಿರುತ್ತಾರೆ. ಈ ರೀತಿಯ ಎನರ್ಜಿ ಡ್ರಿಂಕ್ ಕುಡಿದಾಗ ಶಕ್ತಿ ಬರಬೇಕಲ್ಲವೇ..? ಅದಕ್ಕಾಗಿ ಗೂಳಿಯ ಕೊಬ್ಬನ್ನು ಬಳಕೆ ಮಾಡಿರುತ್ತಾರೆ. ಇದರಿಂದ ಈ ಡ್ರಿಂಕನ್ನು ಕುಡಿದಾಗ ಎನರ್ಜಿ ಬರುತ್ತದೆ..!
ಜೆಲ್ಲಿಯಲ್ಲಿರುತ್ತದೆ ಚರ್ಮ ಮತ್ತು ಮೂಳೆ
ಮಕ್ಕಳು ತಿನ್ನುವ ಗಮ್ ನಂತಹ ಹೆಚ್ಚಿನ ಜೆಲ್ಲಿಗಳನ್ನು ಜಿಲೆಟಿನ್ ನಿಂದ ಮಾಡಲ್ಪಟ್ಟಿರುತ್ತದೆ..! ಇಷ್ಟಕ್ಕೂ ಜೆಲ್ಲಿಯಲ್ಲಿ ಬಳಸುವ ಹೆಚ್ಚಿನ ಜಿಲೆಟಿನನ್ನು ಪ್ರಾಣಿಗಳ ಚರ್ಮ ಮತ್ತು ಮೂಳೆಗಳಿಂದ ತಯಾರಿಸಲಾಗಿರುತ್ತದೆ. ಇದರಿಂದ ಜೆಲ್ಲಿ ಸೇವಿಸಿದರೆ ಆರೋಗ್ಯ ಹದಗೆಡುವುದರಲ್ಲಿ ಅನುಮಾನವೇ ಇಲ್ಲ.
ಮಸಾಲೆಯಲ್ಲಿ ಮರಳು ಮಿಕ್ಸ್
ಭಾರತ ಮಸಾಲೆಗೆ ವಿಶ್ವ ಪ್ರಸಿದ್ಧ. ಒಂದು ಕಾಲದಲ್ಲಿ ಬ್ರಿಟೀಷರು ಭಾರತದ ಮಸಾಲೆಯನ್ನು ಮೆಚ್ಚಿ ತಮ್ಮ ದೇಶಕ್ಕೆ ಕೊಂಡೊಯ್ದದ್ದೂ ಇದೆ. ಆದರೆ ಅಂತಹ ಮಸಾಲೆಯಲ್ಲಿ ಮರಳನ್ನು ಮಿಕ್ಸ್ ಮಾಡಲಾಗುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಉಪ್ಪು ಮತ್ತು ಮೆಣಸಿನಂತಹ ವಸ್ತುಗಳು ತಾಜಾ ಎಂಬಂತೆ ತೋರ್ಪಡಿಸಲು ಮರಳನ್ನು ಮಿಕ್ಸ್ ಮಾಡುತ್ತಾರೆ. ಇಷ್ಟಕ್ಕೂ ಮಸಾಲೆ ಖರೀದಿಸಲು ಹೋದಾಗ ಮರಳು ಮಿಕ್ಸ್ ಮಾಡಿ ಮರಳು ಮಾಡುವ ಜನರ ಬಗ್ಗೆ ಎಚ್ಚರದಿಂದಿರಬೇಕಾದುದು ಅಗತ್ಯ.
ಕೇಕ್ ನಲ್ಲಿರುತ್ತೆ ಮಾರಕ ವಸ್ತು
ಕೇಕ್ ಎಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಕೇಕ್ ಇಷ್ಟ ಆಗುತ್ತೆ. ಆದರೆ ಕೇಕ್ ತಿನ್ನುವ ಮುನ್ನ ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಕೇಕ್ ತಯಾರಿಕೆಯ ವೇಳೆಯಲ್ಲಿ ಪ್ರೊಪಲಿನ್ ಗ್ಲೈಕೋಲ್ ಎಂಬ ಅಂಶವನ್ನು ಸೇರಿಸಲಾಗುತ್ತದೆ. ಇದರಿಂದ ಕೇಕನ್ನು ತಂಪಾಗಿ ಹಾಗೂ ಕೆಡದಂತೆ ಇಡಬಹುದು. ಆದರೆ ಪ್ರೊಪಲಿನ್ ಗ್ಲೈಕೋಲ್ನಿಂದ ಮನುಷ್ಯನ ಆರೋಗ್ಯಕ್ಕೆ ಹಾನಿಯಾಗಬಹುದು ಎನ್ನುತ್ತವೆ ಕೆಲ ಆರೋಗ್ಯ ಇಲಾಖೆಗಳು. ಆದ್ದರಿಂದ ಕೇಕ್ ತಿನ್ನುವ ಮುನ್ನ ಯೋಚಿಸಬೇಕಾದದ್ದು ಅತ್ಯಗತ್ಯ.