ತುಮಕೂರು: ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಮಣ್ಣಗೆ ಭರ್ಜರಿ ಮುನ್ನಡೆಯಲ್ಲಿದ್ದಾರೆ. ಹೌದು ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಚಿವ ವಿ ಸೋಮಣ್ಣನವರು ಪಟ್ಟು ಹಿಡಿದು ಈ ಕ್ಷೇತ್ರದಿಂದ ಟಿಕೆಟ್ ಪಡೆದು ಕಣಕ್ಕಿಳಿದಿರುವುದರಿಂದ ಮತ್ತೆ ಕುತೂಹಲದ ಕಣವಾಗಿ ಮಾರ್ಪಟ್ಟಿದೆ. ಪ್ರಥಮ ಸುತ್ತಿನ ಮತ ಎಣಿಕೆ ಬಳಿಕ ಸೋಮಣ್ಣ ಅವರು 5518 ಮತಗಳ ಮುನ್ನಡೆಯಲ್ಲಿದ್ದಾರೆ. ವಿ ಸೋಮಣ್ಣ 43,798 ಮತ್ತು ಎಸ್.ಪಿ.ಮುದ್ದಹನುಮೇಗೌಡ 38,280 ಮತಗಳನ್ನು ಗಳಿಸಿದ್ದಾರೆ.
ಎರಡನೇ ಸುತ್ತಿನ ಮತ ಎಣಿಕೆ ಬಳಿಕ ವಿ ಸೋಮಣ್ಣ ಅವರು 102342 ಮತಗಳನ್ನು ಗಳಿಸಿದರೆ, ಎಸ್.ಪಿ.ಮುದ್ದಹನುಮೇಗೌಡ 80,755 ಮತಗಳನ್ನು ಗಳಿಸಿದ್ದಾರೆ. 21,587 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಇದಿಗ ಬಂದ ಮಾಹಿತಿ ಪ್ರಕಾರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 1.30 ಲಕ್ಷ ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.