ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು
ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ ಗಿಡವು ಕೇವಲ ಧಾರ್ಮಿಕ ಮಹತ್ವವನ್ನೇ ಹೊಂದಿಲ್ಲ, ಅದು ಅನೇಕ ಔಷಧೀಯ ಗುಣಗಳನ್ನೂ ಒಳಗೊಂಡಿದೆ. ಆಯುರ್ವೇದದಲ್ಲಿ ತುಳಸಿಯ ಎಲೆ, ಹೂವು, ಬೇರುಗಳನ್ನು ಸಾವಿರಾರು ವರ್ಷಗಳಿಂದ ವಿವಿಧ ಕಾಯಿಲೆಗಳಿಗೆ ಬಳಸಲಾಗುತ್ತಿದೆ. ದಿನನಿತ್ಯದ ಟೀ ಬದಲಿಗೆ ತುಳಸಿ ಟೀ ಸೇವಿಸಿದರೆ ಹಲವಾರು ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಬಹುದು.
- ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ಸಕ್ಕರೆ ಸೇರಿಸದ ತುಳಸಿ ಟೀ ಕುಡಿಯುವುದರಿಂದ ರಕ್ತದಲ್ಲಿನ ಶುಗರ್ ಮಟ್ಟ ಕಡಿಮೆಯಾಗಲು ಸಹಾಯವಾಗುತ್ತದೆ. ಇದರಿಂದ ಮಧುಮೇಹ ತಡವಾಗಿ ಬರುವ ಸಾಧ್ಯತೆ ಹೆಚ್ಚುತ್ತದೆ. ಇದಲ್ಲದೇ ತುಳಸಿಯಲ್ಲಿರುವ ಪೋಲಿಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‌ಗಳು ರಕ್ತದಲ್ಲಿ ಸಕ್ಕರೆಯ ಸಮತೋಲನ ಕಾಪಾಡುತ್ತವೆ.
- ಖಿನ್ನತೆ ನಿವಾರಣೆ
ತುಳಸಿ ಟೀ ಕುಡಿಯುವುದರಿಂದ ಮೆದುಳಿನ ಸೆರೋಟೋನಿನ್ ರಸದೂತದ ಮಟ್ಟ ಹೆಚ್ಚುತ್ತದೆ. ಸೆರೋಟೋನಿನ್ ಮುದ ನೀಡುವ ರಸದೂತವಾಗಿದ್ದು ಧನಾತ್ಮಕ ಭಾವನೆ ಹಾಗೂ ನಿರಾಳತೆಯನ್ನು ನೀಡುತ್ತದೆ. ಹೀಗಾಗಿ ಖಿನ್ನತೆಯಿಂದ ಬಳಲುವವರಿಗೆ ತುಳಸಿ ಟೀ ಒಳ್ಳೆಯ ಪರಿಹಾರ.
- ತ್ವಚಾ ವಯೋವೃದ್ಧಿ ತಡೆ
ವಯಸ್ಸಾಗುತ್ತಿದ್ದಂತೆ ಚರ್ಮದ ಸೆಳೆತ ಕುಗ್ಗಿ ನೆರಿಗೆಗಳು ಮೂಡುತ್ತವೆ. ತುಳಸಿ ಟೀಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮಕ್ಕೆ ಪೋಷಣೆ ನೀಡಿ ಕೊಲ್ಯಾಜೆನ್ ಉತ್ಪಾದನೆಯನ್ನು ಕಾಪಾಡುತ್ತವೆ. ಇದರಿಂದ ಚರ್ಮದ ಸೆಳೆತ ಹೆಚ್ಚು ದಿನಗಳವರೆಗೆ ಉಳಿದು ತಾರುನ್ಯ ವೃದ್ಧಿಯಾಗುತ್ತದೆ.
- ಜ್ವರ ಹಾಗೂ ಶೀತಕ್ಕೆ ಪರಿಹಾರ
ತುಳಸಿ ಟೀ ನೈಸರ್ಗಿಕ ನೋವು ನಿವಾರಕವಾಗಿದ್ದು ಜ್ವರ, ಶೀತ ಮುಂತಾದ ವೈರಲ್ ಇನ್ಫೆಕ್ಷನ್‌ಗಳಿಗೆ ಪರಿಣಾಮಕಾರಿ. ಇದು ವೈರಸ್ಸುಗಳ ವಿರುದ್ಧ ಹೋರಾಡಿ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
- ಹೃದಯ ಆರೋಗ್ಯ ರಕ್ಷಣೆ
ತುಳಸಿ ಟೀ ಸೇವನೆಯಿಂದ ಹೃದಯಕ್ಕೆ ರಕ್ಷಣೆಯಾಗುತ್ತದೆ. ಇದರಲ್ಲಿ ಇರುವ ಬೀಟಾ ಕ್ಯಾರೊಟೀನ್ ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತನಾಳಗಳಲ್ಲಿ ಅಡ್ಡಿ ನಿವಾರಿಸಿ ರಕ್ತಸಂಚಾರ ಸುಗಮಗೊಳಿಸುತ್ತವೆ. ಹೀಗಾಗಿ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.