ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ. ಅವರು ಈ ಹಿಂದೆಯೇ ಹೇಳಿದ್ದಂತೆ ಸ್ಟಾರ್ ಆಗಿ ಪ್ರಚಾರ ಮಾಡುತ್ತಿಲ್ಲ. ಮನೆ ಮಕ್ಕಳಂತೆ, ಜೋಡೆತ್ತುಗಳಾಗಿ ತಾಯಿ ಸುಮಲತಾ ಅವರ ಗೆಲುವಿಗೆ ಹಗಲಿರುಳು ದುಡಿಯುತ್ತಿದ್ದಾರೆ.
ಸುಮಲತಾ ಅಂಬರೀಶ್ ಸಹ ದರ್ಶನ್, ಯಶ್ ಮೇಲೆ ಅದೇ ತಾಯಿ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಇಂದು ದರ್ಶನ್ ಕೆ.ಆರ್ ಪೇಟೆ ತಾಲೂಕಿನ ಸೋಮನಹಳ್ಳಿಯಲ್ಲಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸುಮಲತಾ ಅದೇ ಗ್ರಾಮದ ಕುಮಾರ್ ಎನ್ನುವ ರೈತನ ಮನೆಯ ಹಸುವಿನ ಹಾಲು ಕರೆದು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನು ಸುಮಲತಾ ಆ ವಿಡಿಯೋವನ್ನು ಪೋಸ್ಟ್ ಮಾಡಿ ಮಗನೇ ದರ್ಶನ್,..ನೀನು ಈ ಕಾರಣಕ್ಕೆ ಇಷ್ಟ ಎಂದು ಬರೆದಿದ್ದಾರೆ.
ದರ್ಶನ್ ಅವರ ಸರಳತೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ಹಾಗೆಯೇ ಇಂದಿನ ವಿಡಿಯೋವನ್ನು ನೋಡಿ ಮತ್ತಷ್ಟು ಇಷ್ಟವಾಗಿದ್ದಾರೆ. ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ದರ್ಶನ್ ವಿಡಿಯೋ ಪೋಸ್ಟ್ ಮಾಡಿ ಸುಮಲತಾ ಹೇಳಿದ ಮಾತಿಗೆ ಡಿ.ಬಾಸ್ ಫ್ಯಾನ್ಸ್ ಫಿದಾ..!
Date: