ದರ್ಶನ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಉಮಾಪತಿ

Date:

ಬೆಂಗಳೂರು: 25 ಕೋಟಿ ರೂ. ಡೀಲ್ ವಿಚಾರದ ಬಳಿಕ ಸ್ಯಾಂಡಲ್‍ವುಡ್ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಶೀತಲ ಸಮರ ಮುಂದುವರಿದ್ದು, ಇದೀಗ ದರ್ಶನ್ ವಿರುದ್ಧ ಉಮಾಪತಿಯವರು ಸಮರಕ್ಕೆ ಮುಂದಾಗಿದ್ದಾರೆ.

ಲೋನ್ ಲಡಾಯಿಗೆ ಕಾನೂನಾತ್ಮಕವಾಗಿ ಉತ್ತರ ನೀಡಲು ಉಮಾಪತಿ ಮುಂದಾಗಿದ್ದಾರೆ. ಈಗಾಗಲೇ ತಮ್ಮ ಪರವಾಗಿ ಹೆಸರಾಂತ ಇಬ್ಬರು ವಕೀಲರನ್ನು ನೇಮಿಸಿದ್ದಾರೆ. ಹನುಮಂತರಾಯಪ್ಪ ಮತ್ತು ಶ್ಯಾಂಸುಂದರ್ ಅವರನ್ನು ತಮ್ಮ ವಕೀಲರನ್ನಾಗಿ ನೇಮಿಸಿಕೊಂಡು ಉಮಾಪತಿ ಅವರು ದರ್ಶನ್ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದಾರೆ.

ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ದಿನ ಕಳೆದಂತೆ ತಾರಕಕ್ಕೇರುತ್ತಿದೆ. ಈ ನಡುವೆ ಉಮಾಪತಿ ತಾನು ನಂಬುವ ದೇವರುಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಈ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ. ತಿರುಪತಿಯಿಂದ ಬರ್ತಾ ಇದ್ದಂತೆ ನಿರ್ಮಾಪಕ ಲೀಗಲ್ ಫೈಟ್ ಗೆ ಮುಂದಾಗಿದ್ದಾರೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಉತ್ತರಿಸೋದಾಗಿ ಉಮಾಪತಿ ಹೇಳಿದ್ದಾರೆ.

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌

‌ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌ ಬೆಂಗಳೂರು: ಸಿಲಿಕಾನ್‌...

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ: ಡಿ.ಕೆ. ಶಿವಕುಮಾರ್

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ:...

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ಬೆಂಗಳೂರು: ನಗರದ...

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ...