ಮಂಡ್ಯದಲ್ಲಿ ಒಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲವೆಡೆ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ನಟ ಉಪೇಂದ್ರ ಇಂದಿನಿಂದಲೇ ಮಂಡ್ಯದಿಂದ ತಮ್ಮ ಪ್ರಚಾರ ಆರಂಭಿಸಿದ್ದಾರೆ.
ಪ್ರಚಾರಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ ಅವರು, ಇತ್ತೀಚೆಗೆ ರಾಜಕಾರಣ ವ್ಯಾಪಾರವಾಗಿಬಿಟ್ಟಿದೆ. ರಾಜಕಾರಣವನ್ನು ತೊಲಗಿಸಿ, ಪ್ರಜಾಕಾರಣ ತರುವ ಉದ್ದೇಶ ನಮ್ಮದು ಎಂದು ತಿಳಿಸಿದ್ರು.
ಇನ್ನೂ 14 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಆಗಬೇಕಿದೆ. ರೋಡ್ ಶೋಗಳ ಮೇಲೆ ನನಗೆ ನಂಬಿಕೆ ಇಲ್ಲ.
ಮುಂದಿನ ಪೀಳಿಗೆಗಾದರೂ ಪ್ರಜಾಕಾರಣ ಬೇಕು. ಪ್ರಸ್ತುತ ರಾಜಕಾರಣ ಬಲಿಷ್ಠವಾದ ಜನರ ಕೈಯ್ಯಲ್ಲಿದೆ. ಹಣ, ಹೆಸರು, ಮಸಲ್ ಪವರ್ ಇರುವವರ ಬಳಿ ಅಧಿಕಾರ ಸಿಕ್ಕಿ ಹಾಕಿಕೊಂಡಿದೆ ಜಾತಿ, ಹಣದ ಆಟವನ್ನು ರಾಜಕೀಯ ಹೋಗಲಾಡಿಸುವ ಪ್ರಯತ್ನ ನಮ್ಮದು ಎಂದ ಉಪೇಂದ್ರ ಜ್ಞಾನ, ಶ್ರಮದ ಮೂಲಕ ಅಧಿಕಾರ ಶಾಹಿಗಳ ವಿರುದ್ಧ ಚುನಾವಣೆ ನಡೆಸಬಹುದು ಸಿನಿಮಾ ಹಾಗೂ ಪಕ್ಷದ ಮೂಲಕ ಜನರ ಮನಃಪರಿವರ್ತನೆ ಮಾಡುವುದಕ್ಕೆ ಹೋಗುತ್ತಿದ್ದೇನೆ. ತಿಳಿಸಿದರು.