ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ!!

Date:

2021ರಲ್ಲಿ ಜೀವನ ನಡೆಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಮೇಲು ಜಾತಿ ಕೀಳುಜಾತಿ ಎಂದೆಲ್ಲಾ ಭೇದಭಾವ ಮಾಡಿಕೊಂಡು ಬದುಕುತ್ತಿದ್ದ ಹಳ್ಳಿ ವಾಸಿಗಳೇ ಇಂದಿನ ಕಾಲಕ್ಕೆ ತಕ್ಕಂತೆ ಹಳೆಯ ಅಸ್ಪೃಶ್ಯತೆಯನ್ನು ಬಿಟ್ಟು ಬದುಕುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಓದು ಬರಹ ಕಲಿತ ಉನ್ನತ ಹುದ್ದೆಗಳಲ್ಲಿರುವ ಕೆಲ ಮಂದಿಗೆ ಇನ್ನೂ ಸಹ ಜಾತಿ ಎಂಬ ಭೂತ ಬಿಟ್ಟಂತೆ ಕಾಣುತ್ತಿಲ್ಲ.

 

 

ಹೌದು ಚಿಕ್ಕಮಗಳೂರಿನ ಗೋಣಿಬೀಡು ಠಾಣೆಯ ಪಿಎಸ್ಐ ಅರ್ಜುನ್ ಅಮಾನವೀಯ ಕೃತ್ಯವನ್ನು ಎಸಗಿದ್ದಾನೆ. ಗ್ರಾಮದ ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಜಗಳವಾಡಿಕೊಂಡಿದ್ದಾಳೆ, ಈ ಜಗಳದ ಕುರಿತು ಯಾವುದೇ ದೂರು ದಾಖಲಾಗದೇ ಇದ್ದರೂ ಸಹ ಅದೇ ಗ್ರಾಮದ 22 ವರ್ಷದ ದಲಿತ ಯುವಕ ಪುನೀತ್ ಎಂಬುವವನನ್ನು ಪಿಎಸ್ಐ ಅರ್ಜುನ್ ಠಾಣೆಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದಾನೆ.

 

 

ಆ ಮಹಿಳೆ ಜೊತೆ ಅಕ್ರಮ ಸಂಬಂಧ ಇದ್ದು ಆಕೆಯನ್ನು ನಾನೇ ಬಚ್ಚಿಟ್ಟಿದ್ದೇನೆ ಅಂತ ಒಪ್ಪಿಕೊ ಎಂದು ಪುನೀತ್ ಎಂಬ ದಲಿತ ಯುವಕನಿಗೆ ಠಾಣೆಯಲ್ಲಿ ಮನಸೋ ಇಚ್ಛೆ ಪಿಎಸೈ ಅರ್ಜುನ್ ಬಾರಿಸಿದ್ದಾನೆ. ಮಾತು ಕೇಳದ ಆ ಯುವಕನಿಗೆ ಪಿಎಸ್ಸೈ ಅರ್ಜುನ್ ಮೂತ್ರ ಕೊಡಿಸಿದ್ದಾನೆ ಅಷ್ಟೇ ಅಲ್ಲದೆ ಮೂತ್ರವನ್ನು ನೆಕ್ಕಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆ ಪಿಎಸೈ ದಲಿತ ಯುವಕ ಪುನೀತ್ ಮೇಲೆ ಜಾತಿ ನಿಂದನೆ ಮಾಡಿ ಕೈಕಾಲುಗಳಲ್ಲಿ ರಕ್ತ ಬರುವ ಮಟ್ಟಿಗೆ ಹೊಡೆದು ತಡರಾತ್ರಿ ಮನೆಗೆ ಕಳುಹಿಸಿದ್ದಾನೆ. ಇದೀಗ ದೌರ್ಜನ್ಯಕ್ಕೊಳಗಾಗಿರುವ ಯುವಕ ಪುನೀತ್ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾನೆ.

Share post:

Subscribe

spot_imgspot_img

Popular

More like this
Related

ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ

ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಮಾಡಬೇಕೇ? ಇಲ್ಲಿದೆ ಉತ್ತರ ಪ್ರತಿದಿನ ಬೆಳಗ್ಗೆ ಸೂರ್ಯೋದಯದ...

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್...

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್....