ಭಾರತದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಅರಿವಿನ ಕೊತರೆಯಿದೆ. ಆದ್ರೆ ಒಬ್ಬ ವ್ಯಕ್ತಿ ಆರೋಗ್ಯವಂತರಾಗಿರಲು ಸೆಕ್ಸ್ ಬಹು ಮುಖ್ಯ ಎಂಬುದು ಲೈಂಗಿಕ ತಜ್ಞರ ಮಾತು. ಅಷ್ಟೇ ಅಲ್ಲದೇ ಲೈಂಗಿಕ ಕ್ರಿಯೆಯಲ್ಲಿ ನಿಯಮಿತವಾಗಿ ಭಾಗಿಯಾಗುವುದರಿಂದ ಹೃದ್ರೋಗದ ಸಮಸ್ಯೆಗೆ ಉಂಟಾಗುವುದಿಲ್ಲ ಎಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ.
ಆಧುನಿಕ ಜೀವನ ಶೈಲಿಯಲ್ಲಿ ಕಂಡು ಬರುತ್ತಿರುವ ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಲೈಂಗಿಕ ಚಟುವಟಿಕೆಗಳು ಮುಖ್ಯ ಪಾತ್ರವಹಿಸುತ್ತದೆ. ಸೆಕ್ಸ್ನಲ್ಲಿ ತೊಡಗುವುದರಿಂದ ಮನಸ್ಸಿನ ಸಮತೋಲನ, ದೇಹದಲ್ಲಿ ಹಾರ್ಮೋನುಗಳು ಸೂಕ್ತ ಪ್ರಯಾಣದಲ್ಲಿ ಉತ್ಪತಿಯಾಗುತ್ತದೆ. ಸುಖಕರವಾದ ದಾಂಪತ್ಯ ಜೀವನ ನಿಮ್ಮದಾಗಬೇಕಿದ್ದರೆ ವರ್ಷಕ್ಕೆ ಕಡಿಮೆ ಅಂದ್ರೂ 60 ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ವಯಸ್ಕರು ಅಂತೂ 100ರ ಗಡಿ ದಾಟಿದರೇ ಇನ್ನು ಸೂಕ್ತವಾಗಿರುತ್ತೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ವರ್ಷದಿಂದ ವರ್ಷಕ್ಕೆ ಲೈಂಗಿಕ ಕ್ರಿಯೇಯ ಸಂಖ್ಯೆಯೂ ಹೆಚ್ಚಿದ್ರೆ ದಾಂಪತ್ಯ ಜೀವನ ಸುಖಮಯವಾಗಿರುತ್ತೆ. ಅದ್ರಲ್ಲಿ ವಾರಕ್ಕೆ ಬಿಡುವಿನ ವೇಳೆಯಲ್ಲಿ 2 ರಿಂದ 3 ಬಾರಿ ಸೆಕ್ಸ್ ನಡೆಸಿದ್ರೆ ನೆಮ್ಮದಿ ಮತ್ತು ತೃಪ್ತಿ ನಿಮ್ಮದಾಗಲಿದೆ.