ದಿನೇ ದಿನೇ ಏರುತ್ತಿದೆ ಚಿನ್ನದ ದರ..! ಹೀಗಿದೆ ನೋಡಿ ಇಂದಿನ ಗೋಲ್ಡ್ ರೇಟ್
ಭಾರತದಂತಹ ದೇಶದಲ್ಲಿ ಚಿನ್ನಕ್ಕೆ ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿರುತ್ತದೆ. ಇನ್ನು, ಚಿನ್ನವನ್ನು ಬಿಸ್ಕತ್, ಗಟ್ಟಿ ಬಂಗಾರ ಇಲ್ಲವೇ ಆಭರಣಗಳ ರೂಪದಲ್ಲಿ ಸಾಮಾನ್ಯವಾಗಿ ಕೊಳ್ಳಲಾಗುತ್ತದೆ.
ಚಿನ್ನವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರು ಕೊಳ್ಳಲು ಬಯಸುತ್ತಾರೆ, ಕಾರಣ ಆರ್ಥಿಕವಾಗಿ ತಲೆದೋರುವ ಕಷ್ಟದ ಸಂದರ್ಭಗಳಲ್ಲಿ ಚಿನ್ನವು ಆಪದ್ಭಾಂಧವನಂತೆ ಸಹಾಯಕ್ಕೆ ಬರುವುದೇ ಆಗಿದೆ ಎಂದರೆ ತಪ್ಪಿಲ್ಲ. ಹಾಗಾದ್ರೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.
ಅಪರಂಜಿ ಚಿನ್ನದ ಬೆಲೆ ಭಾರತದಲ್ಲಿ 8,800 ರೂ ಮೈಲಿಗಲ್ಲು ಮುಟ್ಟಿ ಹೊಸ ದಾಖಲೆ ಬರೆದಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,600 ರೂ ಗಡಿ ಮುಟ್ಟಿ ದಾಖಲೆ ಮಾಡಿದೆ. ಇತ್ತ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದರೂ ಬೆಳ್ಳಿ ಸ್ತಬ್ಧತೆ ಮುಂದುವರಿದಿದೆ.
ಇಂದೂ ಕೂಡ ಬೆಳ್ಳಿ ಬೆಲೆಯ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 80,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 88,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 80,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,050 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 20ಕ್ಕೆ)
• 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,700 ರೂ
• 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,040 ರೂ
• 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,030 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
• 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,700 ರೂ
• 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 88,040 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
• ಬೆಂಗಳೂರು: 80,700 ರೂ
• ಚೆನ್ನೈ: 80,700 ರೂ
• ಮುಂಬೈ: 80,700 ರೂ
• ದೆಹಲಿ: 80,850 ರೂ
• ಕೋಲ್ಕತಾ: 80,700 ರೂ
• ಕೇರಳ: 80,700 ರೂ
• ಅಹ್ಮದಾಬಾದ್: 80,750 ರೂ
• ಜೈಪುರ್: 80,850 ರೂ
• ಲಕ್ನೋ: 80,850 ರೂ
• ಭುವನೇಶ್ವರ್: 80,700 ರೂ