ದುಪ್ಪಾಟದ ನ್ಯೂಸ್ ಚಾನಲ್ ಗಳ ರೇಟಿಂಗ್..!! ಕಾರಣವೇನು ಗೊತ್ತಾ..?

Date:

ರೇಟಿಂಗ್ ನಲ್ಲಿ ಡಬಲ್ ಸೆಂಚುರಿ ಬಾರಿಸಿದ Tv9.. 3 ಚಾನೆಲ್ ಗಳು ಸೆಂಚುರಿ..!!

ಕಳೆದ ಬಾರಿಯ ಚಾನಲ್ ಗಳ ರೇಟಿಂಗೆ ಹೋಲಿಸಿದ್ರೆ ಈ ಬಾರಿ ಎಲ್ಲ ಚಾನೆಲ್ ಗಳ ಟಿಆರ್ ಪಿ ದುಪ್ಪಟ್ಟಾಗಿದೆ.. ಈ ಮೂಲಕ ಎರಡಂಕಿಯಲ್ಲೇ ಇದ್ದ ಕೆಲ ಚಾನೆಲ್ ಗಳು ಈ ಬಾರಿ ಮೂರಂಕಿಯನ್ನ ದಾಟಿ ಸೆಂಚುರಿ ಬಾರಿಸಿದ ಸಂಭ್ರಮದಲ್ಲಿದೆ.. ಹೌದು, ಈ ಪರಿ ಜನರನ್ನ ನ್ಯೂಸ್ ಚಾನೆಲ್ ಗಳು ಸೆಳೆಯಲು ಕಾರಣವಾಗಿದ್ದು ಅಂಬರೀಶ್ ಅವರ ಸಾವಿನ ಸುದ್ದಿ.. ಆನಂತರ ಸುದ್ದಿಗಳ ಬಗ್ಗೆ ಜನ ನ್ಯೂಸ್ ಚಾನೆಲ್ ನ ಮೊರೆ ಹೋಗಿದ್ರು.. ಹೀಗಾಗೆ ಎಲ್ಲ ಚಾನೆಲ್ ಗಳ ಟಿಆರ್ ಪಿ ಹೆಚ್ಚಾಗಲು ಕಾರಣವಾಗಿದೆ..
ಹಾಗಿದ್ರೆ ಯಾವ್ಯಾವ ಚಾನೆಲ್ ಎಷ್ಟೆಷ್ಟು ರೇಟಿಂಗ್ ಪಡೆದುಕೊಂಡಿದೆ ಎಂಬ ಡಿಟೇಲ್ಸ್ ಇಲ್ಲಿದೆ ನೋಡಿ..

ಎಂದಿನಂತೆ ನಂಬರ್.1 ಸ್ಥಾನದಲ್ಲಿರುವ ಟಿವಿ 9, ಈ ಬಾರಿ 255 ರೇಟಿಂಗ್ ಪಡೆದಿದೆ.. ಎರಡನೇ ಸ್ಥಾನದಲ್ಲಿರುವ ಚಾನೆಲ್ ಪಬ್ಲಿಕ್ ಟಿವಿ 152 ರೇಟಿಂಗ್ ಅನ್ನ ಪಡೆದುಕೊಂಡಿದೆ.. ಕಳೆದ ವಾರ ಈ ಚಾನೆಲ್ ನ ಬಾರ್ಕ್ ರೇಟಿಂಗ್ 50ರ ಆಸುಪಾಸಿನಲ್ಲಿತ್ತು.. ಇನ್ನು ಸುವರ್ಣ ನ್ಯೂಸ್ ಸಹ ಅಂಬಿ ಅವರ ಸುದ್ದಿಯನ್ನ ಸತತ ಪ್ರಸಾರ ಮಾಡುವಲ್ಲಿ ಹಿಂದೆ ಬಿದ್ದಿರಲಿಲ್ಲ.. ಹೀಗಾಗೆ ಸುವರ್ಣ ವಾಹಿನಿ 123 ರೇಟಿಂಗ್ ಅನ್ನ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ.. ಇದರ ಜೊತೆಗೆ ನ್ಯೂಸ್ 18 ಸಹ 109 ರೇಟಿಂಗ್ ಪಡೆಯುವ ಮೂಲಕ ನೂರರ ಗಡಿದಾಟಿದ ಮತ್ತೊಂದು ಚಾನೆಲ್ ಆಗಿದೆ..

ಇವುಗಳನ್ನ ಬಿಟ್ರೆ, ದಿಗ್ವಿಜಯ ನ್ಯೂಸ್ 39, ಬಿಟಿವಿ 31, ಟಿವಿ 5- 26, ಪ್ರಜಾ ಟಿವಿ 23, ಕಸ್ತೂರಿ ನ್ಯೂಸ್ 18, ರಾಜ್ ನ್ಯೂಸ್ 12, ನ್ಯೂಸ್ ಎಕ್ಸ್ ಕನ್ನಡ 10, ಟಿವಿ 1 ನ್ಯೂಸ್ 7 ರೇಟಿಂಗ್ ಅನ್ನ ಪಡೆದುಕೊಂಡಿದೆ..

Share post:

Subscribe

spot_imgspot_img

Popular

More like this
Related

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌

ನಾವು ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ: ಡಿ.ಕೆ.ಶಿವಕುಮಾರ್‌ ಬೆಳಗಾವಿ:“ನಾನು ನೀರಾವರಿ...

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್

ಇ-ಖಾತಾ ಮಾಡಿಕೊಡುವಲ್ಲಿ ಗೃಹ ಮಂಡಳಿ ಯಿಂದ ನಿರ್ಲಕ್ಷ ವಾಗಿಲ್ಲ: ಸಚಿವ ಜಮೀರ್ ಬೆಳಗಾವಿ:...

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ

ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ ಬೆಳಗಾವಿ: ರಾಜ್ಯದಲ್ಲಿ ಕೃಷಿ...

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್ ಹೀಗಿದೆ

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್...