ರಾಷ್ಟ್ರದ ರಾಜಧಾನಿ ದೆಹಲಿಯ ಪಾಲಮ್ ಪ್ರದೇಶದಲ್ಲಿ 46.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮೇ ತಿಂಗಳಲ್ಲಿ ದಾಖಲಾಗಿರುವ ದಾಖಲೆಯ ಗರಿಷ್ಠ ತಾಪಮಾನ ಇದಾಗಿದೆ. 2013 ರ ಮೇ ತಿಂಗಳಲ್ಲಿ 47.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ನಂತರ ದೆಹಲಿಯಲ್ಲಿ 5 ವರ್ಷಗಳ ಬಳಿಕ ಗರಿಷ್ಠ ತಾಪಮಾನ ದಾಖಲಾಗಿದೆ.
1998ರ ಮೇ 26 ರಂದು 48.4 ಡಿಗ್ರಿ ತಾಪಮಾನ ದಾಖಲಾಗಿದ್ದು, ಬಿಸಿಲ ತಾಪಕ್ಕೆ ರಾಜಧಾನಿ ದೆಹಲಿ ಜನತೆ ತತ್ತರಿಸಿ ಹೋಗಿದ್ದು ಈ ವರೆಗಿನ ಗರಿಷ್ಠ ತಾಪಮಾನ ಇದಾಗಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಇನ್ನು ಉತ್ತರ ಕರ್ನಾಟಕದಲ್ಲೂ ಭಾರಿ ತಾಪಾಮಾನ ಏರಿಕೆ ಆಗಿದೆ ಕಲುಬುರ್ಗಿಯಲ್ಲೂ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತೆಲಂಗಾಣದ ರಾಮಗುಂಡಂ ನಲ್ಲಿ 47.2 ಹಾಗೂ ಮಹಾರಾಷ್ಟ್ರದ ವಿಧರ್ಭದಲ್ಲಿ ಅತಿ ಹೆಚ್ಚು 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.