ಹಾಸನ ಲೋಕಸಭಾ ಕ್ಷೇತ್ರದಿಂದ ಹೆಚ್.ಡಿ.ದೇವೇಗೌಡರೇ ಸ್ಪರ್ಧಿಸಲಿ’ ಅಂತಾ ಸಚಿವ ಹೆಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ಆಹ್ವಾನ ನೀಡಿದ್ದಾರೆ.
ದೇವೇಗೌಡರು ಈಗಾಗಲೇ ಹಾಸನ ಕ್ಷೇತ್ರವನ್ನ ಪ್ರಜ್ವಲ್ ರೇವಣ್ಣರಿಗೆ ಬಿಟ್ಕೊಟ್ಟಿದ್ದಾರೆ. ಆದ್ರೆ ಏಕಾಏಕಿ ಪ್ರಜ್ವಲ್ ಮತ್ತು ಹೆಚ್.ಡಿ.ರೇವಣ್ಣ, ದೇವೇಗೌಡರಿಗೆ ಹಾಸನದಿಂದ ಸ್ಪರ್ಧೆಗೆ ಆಹ್ವಾನ ಕೊಟ್ಟಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.
ನಿನ್ನೆಯವರೆಗೂ ಎ.ಮಂಜು ಅವರಿಂದ ಪ್ರಜ್ವಲ್ ರೇವಣ್ಣರಿಗೆ ಯಾವುದೇ ಕಂಟಕವಿರಲಿಲ್ಲ. ಆದ್ರೆ ನಿನ್ನೆ ರಾತ್ರಿ ಎ.ಮಂಜು ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಿದ್ದಾರೆ. ಎ.ಮಂಜು ಬಿಜೆಪಿಯಿಂದ ಕಣಕ್ಕಿಳಿದ್ರೆ ಪ್ರಜ್ವಲ್ ರೇವಣ್ಣ- ಎ.ಮಂಜು ನಡುವೆ ನೇರ ಹಣಾಹಣಿ ಏರ್ಪಡಲಿದೆ. ಈಗಾಗಲೇ ಎ.ಮಂಜು ಅವರನ್ನು ಸಮಾಧಾನಪಡಿಸುವಂತೆ ಸಿದ್ದರಾಮಯ್ಯರ ಬಳಿ ಹೆಚ್.ಡಿ.ರೇವಣ್ಣ ಮನವಿ ಮಾಡಿದ್ದು ವರ್ಕೌಟ್ ಆಗಿಲ್ಲ. ಈಗ ಮಂಜು ಅಭ್ಯರ್ಥಿಯಾದ್ರೆ ಹಾಸನದಲ್ಲಿ ನೆಕ್ ಟು ನೆಕ್ ಫೈಟ್ ಗ್ಯಾರೆಂಟಿ. ಒಂದು ವೇಳೆ ಪ್ರಜ್ವಲ್ ರೇವಣ್ಣ ವಿರುದ್ಧ ಕಣಕ್ಕಿಳಿದು ಎ.ಮಂಜು ಗೆದ್ದರೆ ತವರು ನೆಲದಲ್ಲೇ ಜೆಡಿಎಸ್ ಭಾರೀ ಮುಖಭಂಗವಾಗಲಿದ್ದು, ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬುದು.
ಇತ್ತ ಹೆಚ್.ಡಿ.ದೇವೇಗೌಡ್ರು ಬೆಂಗಳೂರು ಉತ್ತರವಾ ಅಥವಾ ತುಮಕೂರು ಕ್ಷೇತ್ರವಾ ಎಂಬುದನ್ನು ಈವರೆಗೂ ಸ್ಪಷ್ಟವಾಗಿ ಹೇಳಿಲ್ಲ. ದೇವೇಗೌಡರಿಗೆ ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರಗಳಿಂದ ಗೆಲುವು ನಿಶ್ಚಿತ ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಒಂದು ವೇಳೆ ದೊಡ್ಡಗೌಡರು ಸೋತರೆ ಜೆಡಿಎಸ್‌ಗೆ ರಾಷ್ಟ್ರಮಟ್ಟದಲ್ಲಿ ಮುಖಭಂಗವಾಲಿದೆ. ಹೀಗಾಗಿ ಹಳೆಯ ಕ್ಷೇತ್ರವೇ ಬೆಸ್ಟ್ ಎಂಬುದು ಹೆಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣರ ಅಭಿಪ್ರಾಯ.
ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ 2 ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇತ್ತ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ, ಅರಸೀಕೆರೆ ಶಾಸಕರಾದ ಶಿವಲಿಂಗೇಗೌಡರ ವಿರೋಧ ಕಟ್ಟಿಕೊಂಡಿದ್ದಾರೆ. ಜೊತೆಗೆ ಸಮ್ಮಿಶ್ರ ಸರ್ಕಾರದಲ್ಲಿ ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ಹೊರಗೀಡಲಾಗಿದೆ. ಈ ಇಬ್ಬರು ಶಾಸಕರುಗಳು ಜೆಡಿಎಸ್‌ಗೆ ಕೈ ಕೊಡಬಹುದು ಎಂಬ ಭಯ ಕಾಡುತ್ತಿದೆ.