ಕಾಂಗ್ರೆಸ್ ಸಂಸದ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧ ತೊಡೆ ತಟ್ಟಿದ್ದ ಎಸ್.ಪಿ ಮುದ್ದಹನುಮೇಗೌಡ ಈಗ ಅದೇ ದೊಡ್ಡಗೌಡರ ಪಾಲಿಗೆ ‘ಮುದ್ದು’ ಗೌಡರಾಗಿದ್ದಾರೆ.
ತುಮಕೂರಲ್ಲಿ ತನ್ನ ಸಂಸದ ಮುದ್ದುಹನುಮೇಗೌಡರು ಇದ್ದರೂ ಕಾಂಗ್ರೆಸ್ ದೋಸ್ತಿ ಜೆಡಿಎಸ್ ಗೆ ತುಮಕೂರನ್ನು ಬಿಟ್ಟುಕೊಟ್ಟಿದೆ. ಇದರಿಂದ ಬೇಸರಗೊಂಡ ಸಂಸದ ಮುದ್ದಹನುಮೇಗೌಡರು ದೇವೇಗೌಡರ ವಿರುದ್ಧವೇ ಕಣಕ್ಕೆ ಇಳಿದಿದ್ದರು. ನಾಮಪತ್ರ ಸಲ್ಲಿಕೆ ಮಾಡಿದ್ದರು. ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸಿದ್ದು ದೇವೇಗೌಡ್ರಿಗೆ ದೊಡ್ಡ ತಲೆನೋವು ತಂದಿತ್ತು. ಆದರೆ ಕಾಂಗ್ರೆಸ್ ನಾಯಕರ ಒತ್ತಡ,ಮನವೊಲಿಕೆ ಯತ್ನ ಗೆದ್ದಿದ್ದು ಮುದ್ದಹನುಮೇಗೌಡರು ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಈಗಾಗಿ ದೊಡ್ಡಗೌಡರು ಆರಾಮಾಗಿದ್ದಾರೆ.
ಮುದ್ದಹನುಮೇಗೌಡರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಸಿಟ್ಟಿಗೆದ್ದು ನಾಮಪತ್ರ ಸಲ್ಲಿಸಿದ್ದ , ಮಾಜಿ ಶಾಸಕ ಕೆ.ಎನ್ ರಾಜಣ್ಣ ಸಹ ನಾಮಪತ್ರ ವಾಪಸ್ಸು ಪಡೆದಿದ್ದಾರೆ.
ಮುದ್ದಹನುಮೇಗೌಡ ಮತ್ತು ರಾಜಣ್ಣ ದೇವೇಗೌಡ್ರಿಗೆ ಬೆಂಬಲ ನೀಡಿ ಪ್ರಚಾರ ಮಾಡ್ತಾರ ಎನ್ನುವುದು ಯಕ್ಷಪ್ರಶ್ನೆ.