ಡೆಹ್ರಾಡೂನ್ (ಉತ್ತರಾಖಂಡ್) : ಅದು ನಮ್ಮ ದೇಶದ ಕಟ್ಟ ಕಡೆಯ ಹಳ್ಳಿ. ಉತ್ತರಾಖಂಡ್ನ ಚಮೋಲಿ ಜಿಲ್ಲೆಯ ಹಳ್ಳಿಯದು.. ಆ ಹಳ್ಳಿಯ ಹೆಸರು ಮನು. ಇಲ್ಲಿ ಶೀತದ ಪ್ರಮಾಣ ಹೆಚ್ಚಿದ್ದು ಬೆಟ್ಟಗುಡ್ಡಗಳೆಲ್ಲಅ ಬಿಳಿ ಬಣ್ಣದಿಂದ ಕಣ್ಮನ ಸೆಳೆಯುವಂತಿವೆ. ಆದರೆ, ಈ ಸೌಂದರ್ಯ ಅಲ್ಲಿಯವರೆಗೆ ಬೇಡವಾಗಿದೆ! ಯಾಕಂದರೆ ಅಲ್ಲಿ ಕುಡಿಯಲು ನೀರೇ ಇಲ್ಲದಂತಾಗಿದೆ.
ನಿಜ, ಉತ್ತರ ರಾಜ್ಯಗಳಲ್ಲಿ ಈಗಾಗಲೇ ಚಳಿಯ ಪ್ರಮಾಣ ಹೆಚ್ಚಿದೆ. ಉತ್ತರಾಖಂಡ್ನಲ್ಲಿರುವ ದೇಶದ ಕಡೆಯ ಹಳ್ಳಿ ಮನದಲ್ಲಿ ಕುಡಿಯಲು ನೀರೇ ಸಿಗುತ್ತಿಲ್ಲ. ನೀರೆಲ್ಲ ಮಂಜುಗಡ್ಡೆಯಾಗಿ ಮಾರ್ಪಟ್ಟಿದೆ.ಚಮೋಲಿ ಜಿಲ್ಲೆ ಶೀತದ ಪ್ರಮಾಣ ಹೆಚ್ಚಾಗಿದ್ದು, ಭಾರಿ ಪ್ರಮಾಣದ ಹಿಮಪಾತದಿಂದ ಬೆಟ್ಟ ಗುಡ್ಡಗಳೆಲ್ಲ ಶ್ವೇತ ವರ್ಣದಿಂದ ಕಂಗೊಳಿಸುತ್ತಿವೆ. ಜಿಲ್ಲೆ ಮನ ದೇಶದ ಕಟ್ಟಕಡೆಯ ಹಳ್ಳಿ. ತಾಪಮಾನವು ಮೈನಸ್ 10 ಡಿಗ್ರಿ ತಲುಪಿದ್ದು, ಚಮೋಲಿ ಮತ್ತು ಮನದಲ್ಲಿ ನೀರು ಹೆಪ್ಪುಗಟ್ಟುತ್ತಿದೆ. ಮುಂದಿನ ದಿನಗಳಲ್ಲಿ ಹಿಮಪಾತದ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ. ಪ್ರಕೃತಿ ನೋಡಲು ಸುಂದರವಾಗಿ ಕಂಡರೂ ಬದುಕು ನಡೆಸುವುದು ಕಷ್ಟವಾಗಿದೆ.