ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

Date:

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ಜಾಗತಿಕವಾಗಿ ಜರುಗುತ್ತಿರುವ ವಿದ್ಯಮಾನಗಳು, ಸ್ಥಳೀಯ ಮಟ್ಟದಲ್ಲಿ ಏರಿದ ಬೇಡಿಕೆ ಹೀಗೆ ಹಲವಾರು ಅಂಶಗಳಿಂದಾಗಿ ಬಂಗಾರದ ದರ ಸದ್ಯ ಗಗನಮುಖಿಯಾಗುತ್ತಿದ್ದು ಕೊಳ್ಳ ಬಯಸುವವರ ಕಣ್ಣಲ್ಲಿ ನೀರು ಬರಿಸುತ್ತಿದ್ದರೆ, ಹೂಡಿಕೆ ಮಾಡಿದವರ ಮುಖದಲ್ಲಿ ಸಂತಸ ಮೂಡಿಸುತ್ತಿದೆ.ಭಾರತದಂತಹ ದೇಶದಲ್ಲಿ ಮೊದಲಿನಿಂದಲೂ ಚಿನ್ನಕ್ಕೆ ಅಪಾರವಾದ ಬೇಡಿಕೆಯಿದೆ. ಅಂಥದ್ದರಲ್ಲಿ ಚಿನ್ನದ ದರದಲ್ಲಿನ ಏರಿಕೆ ಸಾಕಷ್ಟು ಗ್ರಾಹಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಇನ್ನೊಂದೆಡೆ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಇದೊಂದು ವರದಾನವಾಗಿ ಪರಿಣಮಿಸುತ್ತಿದೆ ಎನ್ನಬಹುದು.

ಇಂದು ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಏರಿವೆ. ಚಿನ್ನದ ಬೆಲೆ 80 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 1 ರೂ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 10,180 ರೂ ಇದ್ದದ್ದು 10,260 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 11,193 ರೂಗೆ ಹೆಚ್ಚಿದೆ. ಬೆಂಗಳೂರು, ಮುಂಬೈ ಇತ್ಯಾದಿ ಹೆಚ್ಚಿನ ಕಡೆ ಬೆಳ್ಳಿ ಬೆಲೆ 133 ರೂನಿಂ 134 ರೂಗೆ ಏರಿದೆ. ಚೆನ್ನೈ ಮೊದಲಾದೆಡೆ ಬೆಲೆ 144 ರೂಗೆ ಹೋಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,02,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,11,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 13,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,02,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 13,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 14,400 ರೂ ಇದೆ.

ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 11,193 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,260 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,395 ಇದೆ.

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 102800 ರೂಪಾಯಿ, ಮುಂಬೈ: 102600 ರೂಪಾಯಿ, ದೆಹಲಿ: 102750 ರೂಪಾಯಿ, ಬೆಂಗಳೂರು: 102600 ರೂಪಾಯಿ, ಅಹಮದಾಬಾದ್: 102650 ರೂಪಾಯಿ, ಕೋಲ್ಕತ್ತಾ: 102600 ರೂಪಾಯಿ, ಹೈದರಾಬಾದ್‌: 102600 ರೂಪಾಯಿ, ವಡೋದರಾ: 102650 ರೂಪಾಯಿ

Share post:

Subscribe

spot_imgspot_img

Popular

More like this
Related

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...