ದೊಡ್ಡ ಸಿನಿಮಾಗೆ ಆಯ್ಕೆಯಾದ ಗಟ್ಟಿಮೇಳ ಅಮೂಲ್ಯ!

admin
By admin
1 Min Read

ಧಾರಾವಾಹಿ ಮೂಲಕ ನಟನಾ ವೃತ್ತಿ ಆರಂಭಿಸಿದ ಹಲವಾರು ಕಲಾವಿದರು ಇಂದು ಸಿನಿಮಾಗಳನ್ನು ಮಾಡಿ ಸ್ಟಾರ್ ಆಗಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಅದೇ ರೀತಿ ಇದೀಗ ಮತ್ತೊಬ್ಬ ನಟಿ ಧಾರಾವಾಹಿಯಿಂದ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ.

 

ಹೌದು ಯಶಸ್ವಿ ಧಾರಾವಾಹಿಯಾದ ಗಟ್ಟಿಮೇಳದ ನಾಯಕಿ ಅಮೂಲ್ಯ ಪಾತ್ರಧಾರಿಯಾದ ನಿಶಾ ರವಿ ಕೃಷ್ಣನ್ ಅವರು ಇದೀಗ ಚಂದನವನದಲ್ಲಿ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಇಪ್ಪತ್ತು ವರ್ಷದ ನಿಶಾ ರವಿ ಕೃಷ್ಣನ್ ಅವರು ತಮ್ಮ ಅದ್ಭುತ ಅಭಿನಯದಿಂದ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

 

 

ಅಮೂಲ್ಯ ಪಾತ್ರದ ಮೂಲಕ ತಾವು ತೋರಿದ ಉತ್ತಮ ಪ್ರದರ್ಶನಕ್ಕೆ ಇದೀಗ ಅವರಿಗೆ ವಿನಯ್ ರಾಜ್ ಕುಮಾರ್ ಅಭಿನಯದ ಅಂದೊಂದಿತ್ತು ಕಾಲ ಚಿತ್ರದಲ್ಲಿ ನಟಿಸುವ ಅವಕಾಶ ಲಭಿಸಿದೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಅವರು ಸಹ ಅಭಿನಯಿಸುತ್ತಿದ್ದು ಇತ್ತೀಚೆಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಚಿತ್ರಕ್ಕೆ ಕ್ಲಾಪ್ ಮಾಡಿ ಶುಭಾಶಯ ಕೋರಿದರು.

Share This Article