ಮಾರ್ಚ್ ತಿಂಗಳಿನಲ್ಲಿ ಭಾರತದ ಮಹಿಳಾ ತಂಡ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಿಯಮಿತ ಓವರ್‌ಗಳ ಸರಣಿ ನಡೆಯಲಿದೆ. ಸರಣಿಯು ಐದು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಭಾರತಕ್ಕೆ ಪ್ರವಾಸ ಬರಲಿರುವ ದಕ್ಷಿಣ ಆಫ್ರಿಕಾ ತಂಡ ಲಕ್ನೋದಲ್ಲಿ ಸರಣಿಗಳನ್ನಾಡಲಿದೆ.
2020 ಮರ್ಚ್‌ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಬಳಿಕ ನಡೆಯುತ್ತಿರುವ ಭಾರತೀಯ ಮಹಿಳಾ ತಂಡಕ್ಕೆ ನಡೆಯುತ್ತಿರುವ ಚೊಚ್ಚಲ ಮಹಿಳಾ ಟೂರ್ನಿಯಿದು. 5 ಏಕದಿನ ಪಂದ್ಯಗಳು ಕ್ರಮವಾಗಿ ಮಾರ್ಚ್ 7, 9, 12, 14, 17ರಂದು ನಡೆದರೆ, 3 ಟಿ20ಐ ಪಂದ್ಯಗಳು ಮಾರ್ಚ್ 20, 21, 23ರಂದು ನಡೆಯಲಿವೆ.
ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ನುಝ್ರತ್ ಪರ್ವೀನ್ (ವಿಕೆಟ್ ಕೀಪರ್), ಆಯುಶಿ ರೆಡ್ಡಿ , ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಸಿ. ಪ್ರತ್ಯುಷಾ, ಸಿಮ್ರಾನ್ ದಿಲ್ ಬಹದ್ದೂರ್.