ಮಂಡ್ಯದಲ್ಲಿ ಸುಮಲತಾ ಸಮಾವೇಶದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಸಿಎಂ ಮತ್ತು ಎದುರಾಳಿ ನಾಯಕರಿಗೆ ಮಾತಿನ ಚಾಟಿ ಬೀಸಿದರು.
ನನ್ನ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ. ನಾನು ಅವರ ಪಕ್ಷವನ್ನು ಕಳ್ಳರ ಪಕ್ಷ ಎಂದಿದ್ದೇನೆ ಅಂತೆ. ನಾನು ಹಾಗೆ ಹೇಳಿಲ್ಲ. ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ. ನಾನು ಹಾಗೆ ಹೇಳಿದ್ದೇನೆ ಎಂದು ತೋರಿಸದರೆ ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ. ಹೋಗುತ್ತೇನೆ ಎಂದರೆ ಹೋಗುತ್ತೇನೆ. ಹೋಗ್ತೀನಿ ಎಂದು ಹೇಳಿ ಹೋಗದೇ ಇರುವುದಿಲ್ಲ ಎಂದು ಟಾಂಗ್ ಕೊಟ್ಟರು.
ದರ್ಶನ್, ಅಭಿ, ಸುಮಲತಾ ಅವರೆಲ್ಲಾ ಹೇಳಿದ್ದೆಲ್ಲಾ ನುಂಗಿಕೊಂಡು ಸುಮ್ಮನಿದ್ದರು. ನನ್ನ ರಕ್ತ ಸುಮ್ಮನಿರಬೇಕಲ್ಲಾ? ಕುದಿಯುತ್ತೆ. ಈಗಲೂ ಹೇಳುತ್ತೇನೆ ನಮ್ಮ ಮನೆ ಹೆಣ್ಣು ಮಕ್ಕಳ ಸುದ್ದಿ ಬಂದರೆ ಸುಮ್ಮನಿರಲ್ಲ. ಅದು ಯಾರೇ ಆಗಿರಲಿ. ಯಾವ ಸ್ಥಾನದಲ್ಲೇ ಇರಲಿ ಎಂದರು.
ಜಾತಿ ಬಗ್ಗೆ ಮಾತಾದ್ತಾರೆ,, ವರ್ಜಿನಲ್ ಮಂಡ್ಯದ ಗೌಡ ಅಭಿ ಎಂದು ಹೇಳಿದರು. ಇಂಥಾ ರಾಜಕೀಯ ಎಲ್ಲೂನೋಡಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ನಿಮ್ಮ ಊರ ಸೊಸೆ ಸುಮಲತಾಕ್ಕ ನಿಂತಿದ್ದಕ್ಕೆ ಎಂಥೆಂಥಾ ಮಾತಾಡ್ತಾರೆ ಎಂದರು.
ಧರ್ಮಸ್ಥಳದ ಮಂಜುನಾಥನ ಆಣೆ ಮಾಡಿದ ಯಶ್ ಹೆಣ್ಮಕ್ಕಳ ಸುದ್ದಿ ಬಂದ್ರೆ ಹುಷಾರ್ ಎಂದ್ರು..!
Date: