ವಿರಾಟ್ ಕೊಹ್ಲಿ.. ಈ ಹೆಸ್ರು ಕೇಳಿದ್ರೆ ಸಾಕು ವಿಶ್ವ ಕ್ರಿಕೆಟ್ನ ಎಲ್ಲಾ ತಂಡದ ಆಟಗಾರರು ಅರೆಕ್ಷಣ ಬೆವರಿ ಬಿಡ್ತಾರೆ.. ತಮ್ಮ ಎದುರಾಳಿ ಭಾರತ.. ಭಾರತದ ವಿರುದ್ಧ ಮ್ಯಾಚ್ ಆಡ್ಬೇಕು ಎಂದಾಗ ಗೆಲುವು-ಸೋಲಿನ ಲೆಕ್ಕಾಚಾರಕ್ಕಿಂತ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವುದು ಹೇಗೆ ಎನ್ನುವುದೇ ದೊಡ್ಡ ತಲೆನೋವು.. ವಿಶ್ವದ ಘಟಾನುಘಟಿ ಬೌಲರ್ಗಳೇ ವಿರಾಟ್ ಕೊಹ್ಲಿ ಕಣಕ್ಕಿಳಿದಾಗ ಗಢಗಢ ನಡುಗುತ್ತಾರೆ..! ತಾನಿರುವುದೇ ದಾಖಲೆಗಳನ್ನು ನಿರ್ಮಿಸುವುದಕ್ಕೆ ಎಂದು ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆ ಮಾಡುವ ಕೊಹ್ಲಿ ಈಗ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ಇಂದು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಆರಂಭವಾಗುತ್ತಿದೆ. ಒಟ್ಟು ಎರಡು ಟೆಸ್ಟ್ ಗಳನ್ನು ಭಾರತ ಆಡುತ್ತಿದೆ. ಈ ಎರಡೂ ಟೆಸ್ಟ್ಗಳನ್ನು ಭಾರತ ಗೆದ್ದಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ 28 ಟೆಸ್ಟ್ಗಳನ್ನು ಗೆದ್ದಂತಾಗುತ್ತದೆ. ಧೋನಿ ನಾಯಕತ್ವದಲ್ಲಿ ಭಾರತ 27 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಸದ್ಯ ಕೊಹ್ಲಿ ನಾಯಕತ್ವದಲ್ಲಿ ಭಾರತ 26 ಟೆಸ್ಟ್ಗಳನ್ನು ಗೆದ್ದಿದೆ.
ಇನ್ನೂ ಒಂದು ಪ್ರಮುಖ ವಿಷಯ ಎಂದರೆ ಧೋನಿ ನಾಯಕತ್ವದಲ್ಲಿ ಭಾರತ 60 ಟೆಸ್ಟ್ಗಳನ್ನು ಆಡಿತ್ತು. ಆದರೆ ಕೊಹ್ಲಿ ನಾಯಕತ್ವದಲ್ಲಿ ಆಡಿರುವುದು 46 ಪಂದ್ಯಗಳನ್ನು ಮಾತ್ರ. ಅತೀ ಕಡಿಮೆ ಪಂದ್ಯಗಳಲ್ಲಿ ಕೊಹ್ಲಿ ಹೆಚ್ಚು ಪಂದ್ಯವನ್ನು ಗೆಲ್ಲಿಸಿಕೊಟ್ಟ ನಾಯಕ ಎನ್ನುವ ಕೀರ್ತಿಗೂ ಪಾತ್ರರಾಗಲಿದ್ದಾರೆ.
ಟೀಮ್ ಇಂಡಿಯಾ ವಿಶ್ವಕಪ್ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು ಟಿ20 ಮತ್ತು ಏಕದಿನ ಸರಣಿಯನ್ನು ಗೆದ್ದಿದೆ. ಇನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಇಂದಿನಿಂದ ಮೊದಲ ಟೆಸ್ಟ್ ಆರಂಭವಾಗುತ್ತಿದೆ. ಟೀಮ್ ಇಂಡಿಯಾದಲ್ಲಿ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ಇಬ್ಬರು ಕನ್ನಡಿಗರಿದ್ದಾರೆ. ಇಬ್ಬರಿಗೂ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಒಳ್ಳೆಯ ಅವಕಾಶ ಇದಾಗಿದೆ.
ಧೋನಿಯ ಆ ವಿಶ್ವ ದಾಖಲೆಯನ್ನು ಪುಡಿ ಪುಡಿ ಮಾಡಲಿದ್ದಾರೆ ವಿರಾಟ್ ಕೊಹ್ಲಿ..!
Date: