ಧೋನಿ ಕಮ್​​ಬ್ಯಾಕ್​ಗೆ ಕನ್ನಡಿಗ ಕೆ.ಎಲ್ ರಾಹುಲ್ ಅಡ್ಡಿನಾ? ಸೆಹ್ವಾಗ್ ಹೇಳಿದ್ದೇನು?

Date:

ಮಹೇಂದ್ರ ಸಿಂಗ್ ಧೋನಿ.. ವಿಶ್ವಕ್ರಿಕೆಟ್ ಆಳಿದ ಅದ್ಭುತ ಕ್ರಿಕೆಟಿಗ..! ಧೋನಿ ಅನ್ನೋ ಹೆಸರಲ್ಲೇ ಒಂದು ಪವರ್ ಇದೆ. ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್​ ಅನ್ನು ತಂದು ಕೊಟ್ಟ ಯಶಸ್ವಿ ನಾಯಕ. ಅತ್ಯುತ್ತಮ ವಿಕೆಟ್​ ಕೀಪರ್.. ಜಗತ್ತಿನ ಶ್ರೇಷ್ಠ ಮ್ಯಾಚ್​ ಫಿನಿಶರ್…ಹೆಲಿಕ್ಯಾಪ್ಟರ್ ಶಾಟ್​ ಸ್ಪೆಷಲಿಸ್ಟ್.. ಹೀಗೆ ಧೋನಿ ಬಗ್ಗೆ ಹೇಳುತ್ತಾ.. ಓದುತ್ತಾ ಹೋದರೆ ಒಮ್ಮೆಯಾದ್ರು ಧೋನಿ ಹಳೇ ಮ್ಯಾಚನ್ನು ಯೂಟ್ಯೂಬ್​ನಲ್ಲಿ ಹುಡುಕಿ ನೋಡ್ಬೇಕು ಅನಿಸುತ್ತೆ.. ನೋಡ್ತೀವಿ ಕೂಡ!


ಇಂಥಾ ಧೋನಿ 2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ವರ್ಲ್ಡ್​​ಕಪ್​ ಬಳಿಕ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ಕಮ್ ಬ್ಯಾಕ್ ಮಾಡ್ತಾರೆ ಎಂಬ ಲೆಕ್ಕಾಚಾರವೂ ಶುರುವಾಗಿತ್ತು. ಆದರೆ, ಕೊರೋನಾ ಭೀತಿಯಿಂದ ಮಾರ್ಚ್ 29ರಿಂದ ನಡಯಬೇಕಿದ್ದ ಐಪಿಎಲ್ 2020 ಸದ್ಯಕ್ಕೆ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಆದರೆ, ನಡೆಯುವುದು ಅನುಮಾನ.. ಹೀಗಾಗಿ ಧೋನಿ ಕ್ರಿಕೆಟ್ ಭವಿಷ್ಯದ ಚರ್ಚೆ ಜೋರಾಗಿದೆ.


ಇದೀಗ ಧೋನಿ ಕಮ್​ಬ್ಯಾಕ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ತುಟಿ ಬಿಚ್ಚಿದ್ದಾರೆ.

ಧೋನಿ ತಂಡಕ್ಕೆ ಕಮ್​​ಬ್ಯಾಕ್ ಮಾಡುವುದು ಕಷ್ಟ. ಕೆ.ಎಲ್ ರಾಹುಲ್ ಮತ್ತು ರಿಷಭ್ ಪಂತ್ ಇರುವುದರಿಂದ ಧೋನಿ ವಾಪಸ್ಸಾಗುವುದು ಕಷ್ಟ ಎಂದಿದ್ದಾರೆ. ಧೋನಿ ಬರುವುದಾದರೆ ರಾಹುಲ್ ಆಡುವ ಪ್ಲೇಸ್​ಗೆ ಬರಬೇಕು.. ರಾಹುಲ್ ಅದ್ಭುತ ಫಾರ್ಮ್​ನಲ್ಲಿರುವುದರಿಂದ ಅವರನ್ನು ಯಾವ್ದೇ ಕಾರಣಕ್ಕೂ ತಂಡದಿಂದ ಕೈ ಬಿಡಲು ಸಾಧ್ಯ ಇಲ್ಲ. ಅಂತೆಯೇ ಯುವ ಆಟಗಾರ ಪಂತ್ ಅವರನ್ನು ಕೂಡ ತಂಡದಿಂದ ಬಿಡಲಾಗಲ್ಲ ಎಂದಿದ್ದಾರೆ.


ಹೌದು ಸದ್ಯ ಪಂತ್ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡುತ್ತಿಲ್ಲವಾದರೂ ಅವರ ಮೇಲೆ ಭರವಸೆ ಇದೆ. ಅವರನ್ನು ಬಿಟ್ಟು ಧೋನಿಯನ್ನಾಡಿಸದರೆ ಎಷ್ಟು ವರ್ಷ ಆಡಿಸಲು ಸಾಧ್ಯ? ಹಾಗಾಗಿ ಪಂತ್​ ಅಥವಾ ಬೇರೆ ಯುವ ಆಟಗಾರರಿಗೆ ಮಣೆ ಹಾಕುವುದು ಅನಿವಾರ್ಯ. ಇನ್ನು ಕನ್ನಡಿಗ ಕೆ.ಎಲ್ ರಾಹುಲ್ ಇತ್ತೀಚೆಗೆ ವಿಕೆಟ್​ ಕೀಪರ್ ಆಗೊಯೂ ತಂಡಕ್ಕೆ ನೆರವಾಗುತ್ತಿರುವುದರಿಂದ ಧೋನಿ ಕಮ್​ಬ್ಯಾಕ್ ನಿಜಕ್ಕೂ ಕಷ್ಟ… ವಿಕೆಟ್ ಕೀಪಿಂಗ್ ಹಾಗೂ ಯಾವ್ದೇ ಕ್ರಮಾಂಕದಲ್ಲೂ ಸಂದರ್ಭಕ್ಕೆ ತಕ್ಕಂತೆ ರಾಹುಲ್ ಬ್ಯಾಟ್ ಬೀಸುತ್ತಿರುವುದರಿಂದ ಬಿಸಿಸಿಐ ಧೋನಿ ಯೋಚನೆ ಕೈ ಬಿಟ್ಟು ಯುವ ಆಟಗಾರರಿಗೆ ಮಣೆ ಹಾಕುವ ಚಿಂತನೆ ಮಾಡಲು ನೆರವಾಗಿದೆ.

Share post:

Subscribe

spot_imgspot_img

Popular

More like this
Related

10ನೇ ತರಗತಿ ವಿದ್ಯಾರ್ಥಿನಿ ಆದ್ಲು ತಾಯಿ! ಪ್ರಿಯಕನಿಂದ ಕೃತ್ಯ – ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ

10ನೇ ತರಗತಿ ವಿದ್ಯಾರ್ಥಿನಿ ಆದ್ಲು ತಾಯಿ! ಪ್ರಿಯಕನಿಂದ ಕೃತ್ಯ – ಬೆಚ್ಚಿಬೀಳಿಸುವ...

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...