ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ಸದ್ಯ ಕೊರೋನಾ ಎಮರ್ಜೆನ್ಸಿ ಎಲ್ಲಾ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ . ಹೀಗಾಗಿ ಎಲ್ಲಾ ಕ್ರೀಡಾ ಟೂರ್ನಿಗಳು ನಡೆಯುತ್ತಿಲ್ಲ . ಮಾರ್ಚ್ 29 ರಿಂದ ಆರಂಭವಾಗಬೇಕಿದ್ದ ಐಪಿಎಲ್ ಕೂಡ ಸದ್ಯಕ್ಕೆ ಮುಂದೂಡಲ್ಟಿದೆ . ಕೊರೋನಾ ಅಟ್ಟಹಾಸ ಹೀಗೆ ಮುಂದುವರಿದರೆ ಬಹುಶಃ ಈ ಬಾರಿ ಐಪಿಎಲ್ ನಡೆಯುವುದಿಲ್ಲ .
ಅವೆಲ್ಲಾ ಇರಲಿ ಕ್ರೀಡಾ ಸುದ್ದಿಗಳಿಗೇನೂ ಕೊರತೆ ಇಲ್ಲ . ಮಾಜಿ ಮತ್ತು ಹಾಲಿ ಆಟಗಾರರು ಹೊಸ ಹೊಸ ಸುದ್ದಿಯನ್ನು ಕ್ರೀಡಾಭಿಮಾನಿಗಳಿಗಾಗಿ ನೀಡುತ್ತಲೇ ಇರುತ್ತಾರೆ .
ಇದೀಗ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್ ಸಾರ್ವಕಾಲಿಕ ಏಕದಿನ ತಂಡವನ್ನು ಪ್ರಕಟಿಸಿದ್ದಾರೆ .
ವಾಸಿಮ್ ಜಾಫರ್ ಪ್ರಕಟಿಸಿದ ವಿಶ್ವದ ಸಾರ್ವಕಾಲಿಕ ಏಕದಿನ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ . ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ , ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ , ನಾಯಕ ವಿರಾಟ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರರು .
ಧೋನಿ ನಾಯಕ : ಟೀಮ್ ಇಂಡಿಯಾದ ಮಾಜಿ ನಾಯಕ , ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಗೆ ಜಾಫರ್ ತಮ್ಮ ತಂಡದಲ್ಲಿಯೂ ನಾಯಕನ ಪಟ್ಟ ಕಟ್ಟಿದ್ದಾರೆ . ಜಾಫರ್ ವಿಶ್ವಶ್ರೇಷ್ಠ ಏಕದಿನ ತಂಡದ ಸಾರಥಿ ಭಾರತಕ್ಕೆ ಟಿ20 , ಏಕದಿನ ವಿಶ್ವಕಪ್ ತಂದು ಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಅನ್ನೋದು ವಿಶೇಷ .
ಸಚಿನ್ , ರೋಹಿತ್ ಆಂಭಿಕರು : ವಾಸಿಮ್ ಜಾಫರ್ ಪ್ರಕಟಿತ ವಿಶ್ವ ಶ್ರೇಷ್ಠ ಏಕದಿನ ತಂಡದಲ್ಲಿ ಆರಂಭಿಕರಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ .
ಕೊಹ್ಲಿ 4 ನೇ ಕ್ರಮಾಂಕ : ಸಚಿನ್ ಮತ್ತು ರೋಹಿತ್ ಆರಂಭಿಕರಾಗಿ ಸ್ಥಾನ ಪಡೆದಿದ್ದರೆ, ವೆಸ್ಟ್ ಇಂಡೀಸ್ ಮಾಜಿ ತಾರೆ ವಿವಿಯನ್ ರಿಚರ್ಡ್ಸ್ 3 ನೇ ಕ್ರಮಕಾಂದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ . ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 4 ನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ . ನಂತರದ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಎ ಬಿ ಡಿವಿಲಿಯರ್ಸ್ ಇದ್ದಾರೆ . ಒಟ್ಟಾರೆ ತಂಡ ಇಂತಿದೆ
ಜಾಫರ್ ನೆಚ್ಚಿನ ಏಕದಿನ ತಂಡ
1. ಸಚಿನ್ ತೆಂಡೂಲ್ಕರ್ (ಭಾರತ), 2. ರೋಹಿತ್ ಶರ್ಮಾ (ಭಾರತ), 3. ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್), 4. ವಿರಾಟ್ ಕೊಹ್ಲಿ (ಭಾರತ), 5. ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), 6. ಬೆನ್ ಸ್ಟೋಕ್ಸ್ (ಇಂಗ್ಲೆಂಡ್), 7. ಎಂ.ಎಸ್.ಧೋನಿ (ಭಾರತ-ಸಿ & ವಿಕೆ), 8. ವಾಸಿಮ್ ಅಕ್ರಮ್ (ಪಾಕಿಸ್ತಾನ), 9. ಶೇನ್ ವಾರ್ನ್ (ಆಸ್ಟ್ರೇಲಿಯಾ)/ ಸಕ್ಲೈನ್ ಮುಷ್ತಾಕ್ (ಪಾಕಿಸ್ತಾನ), 10. ಜೋಯಲ್ ಗಾರ್ನರ್ (ವೆಸ್ಟ್ ಇಂಡೀಸ್), 11. ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ), 12. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ).
ಕೊರೋನಾಗೆ ಅಮೆರಿಕಾ ತತ್ತರ ; 24 ಗಂಟೆಯಲ್ಲಿ 1800 ಮಂದಿ ಸಾವು ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ